ಬೆಳಗಾವಿ: ವಚನೋತ್ಸವ ನಗರ ಘಟಕದವರು ವಾರದ ಸತ್ಸಂಗ ವಚನೋತ್ಸವ ಕಾರ್ಯಕ್ರಮ ಪ್ರತಿ ರವಿವಾರ ಹಮ್ಮಿಕೊಳ್ಳುತ್ತಿರುವದ ಅತ್ಯಂತ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಅಶೋಕ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.
ವಾರದ ಸತ್ಸಂಗ ವಚನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಚನಗಳು ಪ್ರತಿ ಮನೆಗೂ ಮುಟ್ಟುವಂತಾಗಲಿ ಪ್ರತಿವಾರ ಒಂದೊಂದು ಮಗು ಅರ್ಥ ಸಹಿತ ವಚನ ಹೇಳುವಂತಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು. ಉಪನ್ಯಾಸಕ ಸಿದ್ದಪ್ಪ ಪೂಜಾರಿ ಮಾತನಾಡಿದರು.
ಕಾರಂಜಿಮಠದ ಅಪ್ಪಾಜಿ ಸಂಗೀತ ಬಳಗದ ವತಿಯಿಂದ ಸಂಗೀತ ಕಾರ್ಯಕ್ರಮ ಜರುಗಿತು.ಶಂಕರ ಬೇವಿನಗಿಡದ, ಬಸವರಾಜ ಕಮ್ಮಾರ ಇವರು ಹಾಮೋನಿಯಂ ನುಡಿಸಿದರು. ಗದಗ ಪುಣ್ಯಾಶ್ರಮದ ಬಸವರಾಜ ಗಜೇಂದ್ರಗಡ, ಶರಣಪ್ಪ ಗೊಂಗಡಶೆಟ್ಟರ ಇವರು ತಬಲಾ ಸೇವೆ ನೀಡಿದರು. ಭೀಮನಗೌಡ ಪಾಟೀಲ, ಖುಷಿ ಢವಳಿ ಅನುರಾಧ, ಅಶ್ವಿನಿ ಇವರು ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾದರು.
ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲ ಖಟಾವಕರ ನಿರೂಪಿಸಿದರು. ಜಗದೀಶ ಬಾಗನವರ, ಬೋರಪ್ಪ ಹಳ್ಳೂರಿ, ಮಹೇಶ್ವರಯ್ಯ ಹಿರೇಮಠ, ವಿಠ್ಠಲ ಮರಬದ, ಕೃಷ್ಣಾ ಯಲಿಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.