ಅದು ರಾಜ್ಯ ಆಹಾರ ನಿಗಮದ ಅಧ್ಯಕ್ಷರ ಸ್ವಕ್ಷೇತ್ರ. ಆ ಕ್ಷೇತ್ರದಲ್ಲಿ ಬಡವರಿಗೆ ಗೋಧಿ ಕಳಪೆ ವಿತರಿಸಲಾಗ್ತಾ ಇದೆ. ಈ ಗೋಧಿ ಮನುಷ್ಯರು ತಿನ್ನೊದು ಬಿಡಿ ಪ್ರಾಣಿಗಳು ಕೂಡಾ ಮೂಸೋದಿಲ್ಲಾ. ಅಷ್ಟು ಕಳಪೆ ಗೋಧಿ ವಿತರಿಸಲಾಗುತ್ತಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಬಡವರಿಗೆ ಸಿಗುತ್ತಿದೆ ಕಳಪೆ ಗೋಧಿ..!ಅಹಾರ ನಿಗಮದ ಅಧ್ಯಕ್ಷರ ಕ್ಷೇತ್ರದಲ್ಲೇ ಅವಾಂತರ..!ಹೌದು ಅಹಾರ ನಿಗಮದ ಅಧ್ಯಕ್ಷ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರ ಸ್ವ ಕ್ಷೇತ್ರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಇಂತಹ ಅದ್ವಾನ ನಡೆದಿದೆ. ಇಲ್ಲಿನ ಮಾರುತಿ ನಗರದಲ್ಲಿರುವ ಉಮಾ ಮಹೇಶ್ವರಿ ಮಹಿಳಾ ಸಹಕಾರ ಸಂಘದ ಅಡಿಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದ್ದು ಜನೆವರಿ 26ರಂದು ಹಲವು ಪಡಿತರ ಫಲಾನುಭವಿಗಳಿಗೆ ಹುಳು(ನುಸಿ)ಹತ್ತಿರುವ ಗೋಧಿಯನ್ನು ವಿತರಿಸಲಾಗಿದೆ.
ಆಶ್ರಯ ಕಾಲನಿ, ಮಾರುತಿ ನಗರದಲ್ಲಿ ಪಡಿತರ ಪಡೆದುಕೊಂಡಿರುವ ಕೆಲವು ಫಲಾನುಭವಿಗಳು,ನಮಗೆ ಹುಳು ಹತ್ತಿರುವ ಗೋಧಿಯನ್ನು ವಿತರಿಸಿದ್ದಾರೆಎಂದು ಕೇಳಲು ಹೋದರೆ ರೇಷನ್ ಕಾರ್ಡ ರದ್ದುಗೊಳಿಸುವ ಬೆದರಿಕೆ ಹಾಕುತ್ತಿದ್ದಾರಂತೆ. ಈ ಗೋಧಿ ಮನುಷ್ಯರಷ್ಟೇ ಅಲ್ಲ ದನಗಳಿಗೆ ಹಾಕಿದರೂ ಅವುಗಳು ಮೂಸಿ ನೋಡುವುದಿಲ್ಲ. ದಾಸ್ತಾನು ಧಾನ್ಯಕ್ಕೆ ಹುಳು ಹತ್ತಿದ್ದರೂ ಅದನ್ನು ಗಮನಿಸದೇ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.ಹೀಗಾಗಿ ಇವರು ಮಾಡುವ ಅಕ್ರಮವನ್ನು ಯಾರೂ ಪ್ರಶ್ನೆ ಮಾಡದಂತಾಗಿದೆ. ತಮಗೆ ತಿಳಿದಾಗ ಅಂಗಡಿ ತೆರೆಯುತ್ತಾರೆ. ಸರಕಾರದ ನಿಯಮವನ್ನೂ ಒಂದಿಷ್ಟೂ ಪಾಲನೆ ಮಾಡುತ್ತಿಲ್ಲ ಎಂದು ಫಲಾನುಭವಿಗಳು ಆಕ್ರೋಶ ಹೊರಹಾಕಿದ್ದಾರೆ.
.: ಇನ್ನು ಈ ಅಂಗಡಿಯಲ್ಲಿ ಮಾಹಿತಿ ಕೇಳಲು ಹೋದವರೊಂದಿಗೆ ಬೆದರಿಕೆಯ ಮಾತುಗಳನ್ನಾಡಿ ತಮಗೆ ಪರಿಚಯವಿರುವ ಕೆಲವು ಪ್ರಭಾವಿಗಳ ಹೆಸರು ಹೇಳಿ ಮಾಹಿತಿ ಕೇಳಿದವರ ಬಾಯಿ ಮುಚ್ಚಿಸಲು ಮುಂದಾಗುತ್ತಿದ್ದಾರಂತೆ ರೇಷನ್ ಅಂಗಡಿಯವರು.ರೇಷನ್ ಅಂಗಡಿ ಎದುರಿಗೆ ನಾಮಫಲಕವನ್ನೂ ಸಹ ಹಾಕದ ಇವರು ಹೆಚ್ಚಿಗೆ ಕೇಳಿದರೆ ತಹಸೀಲ್ದಾರ್ ಹತ್ತಿರ ಹೋಗಿ ಎನ್ನುತ್ತಾರಂತೆ. ಬಡವರಿಗೆ ಗುಣಮಟ್ಟದ ಆಹಾರಧಾನ್ಯ ವಿತರಿಸಬೇಕಾದ ಅಂಗಡಿಗಾರರು ಅನ್ಯಾಯವನ್ನು ಮಾಡುತ್ತಿದ್ದಾರೆ. ಹುಳು ಹತ್ತಿದ ಗೋಧಿ ಯಾಕೆ ಕೊಟ್ಟಿದ್ದೀರಿ ಎಂದು ಕೇಳಲು ಈ ವಾರ್ಡಿನ ಕಾರ್ಡುದಾರರು ಭಯ ಬೀಳುತ್ತಿದ್ದಾರೆ.ಸರಕಾರದ ನಿಯಮದ ಪ್ರಕಾರ ತಿಂಗಳಲ್ಲಿ ರೇಷನ್ ಎತ್ತುವಳಿ ಆದ ಬಳಿಕ ಅದನ್ನು ನಿಯಮಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಆದ್ರೆ ಮಾತ್ರ ತಮಗೆ ಬೇಕಾದ ನಾಲ್ಕು ದಿನ ವಿತರಿಸಿ ಅಂಗಡಿ ಬಂದ್ ಮಾಡಿಕೊಂಡು ಆಹಾರ ಧಾನ್ಯ ಖಾಲಿ ಎಂದು ಮಾಯವಾಗುತ್ತಾರಂತೆ.
ಇಷ್ಟೆಲ್ಲ ಕಳಪೆ ಅಹಾರವನ್ನು ಅದ್ಹೇಗೆ ಅಹಾರ ಇಲಾಖೆ ಸರಬರಾಜು ಮಾಡಿದೆ ಎಂಬುದೇ ಹಲವು ಸಂಶಯಕ್ಕೆ ಕಾರಣವಾಗಿದೆ. ಬಡವರ ಜೀವದ ಜೊತೆಗೆ ಆಟವಾಡುತ್ತಿರುವ ಇಂತಹವರ ವಿರುದ್ಧ ಅಧಿಕಾರಿಗಳು ಹಾಗೂ ಅಹಾರ ನಿಗಮದ ಅಧ್ಯಕ್ಷರು ಮುಂದಾಗಬೇಕಿದೆ.