ಬೆಳಗಾವಿ: ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್ಸೆಟಿ) ಬೆಳಗಾವಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆ ಅಡಿ ಆಯ್ಕೇಯಾದ ಫಲಾನುಭವಿಗಳಿಗೆ ಫೆ.05 ರಿಂದ ಫೆ.14 ರವರಗೆ 10 ದಿನಗಳ ಅವಧಿಯ ಉದ್ಯಮ ಶೀಲತಾ ಅಭಿವೃದ್ದಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯು ಉಚಿತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು, ಬಿಳಿ ಹಾಳೆಯ ಮೇಲೆ ಹಾಗೂ ನಮ್ಮ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ವಿಳಾಸ, ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆ ಬ್ಯಾಂಕ್ ಸಾಲದ ಮಂಜೂರಾತಿ ಪತ್ರ, ಬ್ಯಾಂಕ್ ಪಾಸ್ ಬುಕ್ಕ್, ಆಧಾರಕಾರ್ಡ ಮತ್ತು ರೇಶನ್ ಕಾರ್ಡ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಫೆ.04 ರೊಳಗಾಗಿ, ಸಿಬಿಆರ್ಸೆಟಿ ಸಂಸ್ಥೆಗೆ ತಲುಪುವಂತೆ ಕಳಿಸಲು ಸೂಚಿಸಲಾಗಿದೆ.
ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್ಸೆಟಿ) ಪ್ಲಾಟ್ ನಂ ಸಿಎ-03 (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಏರಿಯಾ, ಆಟೋ ನಗರ, ಬೆಳಗಾವಿ. ದೂರವಾಣಿ ಸಂಖ್ಯೆ: 0831-2440644, 8296792166, 8660038694, 9845750043.8867388906 ಇವರನ್ನು ಸಂಪರ್ಕಿಸಿ ಎಂದು ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.