Vijaypura

ನೀವು ಏನಾದ್ರು ಮಾಡಿದ್ರೆ ನಾನು ಸುಮ್ಮನಿರಲ್ಲ; ಭೀಮಾತೀರದ ರೌಡಿಶೀಟರ್ ಗಳಿಗೆ ಡಿವೈಎಸ್ಪಿ ಶ್ರೀಧರ ದೊಡ್ಡಿ ಕಡಕ್ ವಾರ್ನಿಂಗ್

Share

ನಿಮ್ಮೆಲ್ಲರ ಕಾರ್ಯ ಚಟುವಟಿಕೆ ಎಲ್ಲವನ್ನು ನೋಡ್ತಿರ್ತಿವಿ, ಇಲ್ಲಿವರೆಗೆ ಆಗಿದ್ದು ಆಗಿ ಹೋಯ್ತು, ನಿಮಗೆ ತೊಂದರೆ ಇದ್ರೆ ನನಗೆ ಬಂದು ಹೇಳಿ, ನೀವು ಏನಾದ್ರು ಮಾಡಿದ್ರೆ ನಾನು ಸುಮ್ಮನಿರಲ್ಲ ಎಂದು ವಿಜಯಪುರ ಜಿಲ್ಲೆಯ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಭೀಮಾತೀರದ ರೌಡಿಶೀಟರ್ ಗಳಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆಯಲ್ಲಿ ರೌಡಿಗಳ ಪರೇಡ್ ನಡೆಸೊ ಮೂಲಕ ಭೀಮಾತೀರದ ಮಹಾದೇವ ಬೈರಗೊಂಡ ಮೇಲೆ ಪೈರಿಂಗ್ ಬಳಿಕ ಮತ್ತಷ್ಟು ಖಾಕಿ ಅಲರ್ಟ್ ಆಗಿದ್ದಾರೆ.

ಚಡಚಣ ಠಾಣೆಯ ರೌಡಿಗಳ ಪರೇಡ್ ನಡೆಸಿದ ಡಿವೈಎಸ್ಪಿ ದೊಡ್ಡಿಯವ್ರು ಕೆಲ ದಿನಗಳ ಹಿಂದಷ್ಟೇ ಇಂಡಿ ಡಿಎಸ್ಪಿಯಾಗಿ ಚಾರ್ಜ್ ತೆಗೆದುಕೊಂಡಿದ್ದಾರೆ‌. ಇಂದಿನ ರೌಡಿ ಪರೇಡ್ ನಲ್ಲಿ ಕಡಕ್ ಎಚ್ಚರಿಕೆ ನೀಡುತ್ತಾ ಎಲ್ಲದಕ್ಕು ವೆಪನ್ ಹಿಡಿದರೇ ಸುಮ್ಮನಿರೋದಿಲ್ಲ ಎಂದು ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡು ಇದೆಲ್ಲ ಬಿಟ್ಟು ಬಾಳೆಹಣ್ಣು ಮಾರಾಟ ಮಾಡಿ ಜೀವನ ಸಾಗಿಸಿ, ನಿಮ್ಮೆಲ್ಲರ ಕಾರ್ಯ ಚಟುವಟಿಕೆಗಳ ಬಗ್ಗೆ ಖುದ್ದಾಗಿ ನಿಗಾವಹಿಸ್ತೀನಿ, ಪ್ರತಿ 15 ದಿನಕ್ಕೊಮ್ಮೆ ಠಾಣೆಗೆ ಬಂದು ಹಾಜರಾಗುವಂತೆ ರೌಡಿಗಳಿಗೆ ತಾಕೀತು ಮಾಡಿದರು…

Tags:

error: Content is protected !!