Raibag

ನಿಲಜಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸಂದೀಪ ಪಾಟೀಲ, ಉಪಾಧ್ಯಕ್ಷರಾಗಿ ಮಂಗಲಾ ನಿಂಬಾಳಕರ ಆಯ್ಕೆ

Share

ರಾಯಬಾಗ ತಾಲೂಕಿನ ನಿಲಜಿ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗುಪ್ತ ಮತದಾನದ ಮೂಲಕ ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸಂದೀಪ ಪಾಟೀಲ, ಉಪಾಧ್ಯಕ್ಷರಾಗಿ ಮಂಗಲಾ ನಿಂಬಾಳಕರ ಆಯ್ಕೆಯಾದರು.

ರಾಯಬಾಗ ತಾಲೂಕು ಪಂಚಾಯತಿಯ ನಿಲಜಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಿತು. ಪಶು ವೈದ್ಯಾಧಿಕಾರಿ ನಿಲಜಿ ಗ್ರಾಮ ಪಂಚಾಯತ ಚುನಾವಣಾಧಿಕಾರಿ ರಾಮು ರಾಠೋಡ ಸಮ್ಮುಖದಲ್ಲಿ ಚುನಾವಣೆ ಏರ್ಪಡಿಸಲಾಗಿತ್ತು. ಬಿಜೆಪಿ ಬೆಂಬಲಿತ 18 ನೂತನ ಸದಸ್ಯರನ್ನು ಒಳಗೊಂಡ ನಿಲಜಿ ಗ್ರಾಮ ಪಂಚಾಯತಿಯಲ್ಲಿ ಮತದಾನದ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಿತು.

ಈ ಚುನಾವಣೆಯಲ್ಲಿ ಸಂದೀಪ ಪಾಟೀಲ 11 ಮತಗಳನ್ನು ಪಡೆದು ಅಧ್ಯಕ್ಷರಾಗಿ ಮತ್ತು ಮಂಗಲಾ ನಿಂಬಾಳಕರ 11 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.

ನಂತರ ಗೆಲುವು ಸಾಧಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿಮಾನಿಗಳಿಂದ ಗುಲಾಲ ಎರಚಿ ಮತ್ತು ಪಟಾಕಿ ಸಿಡಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾಲ್ಬಿ ಮತ್ತು ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಗ್ರಾಮದ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದ ಪಡೆದುಕೊಂಡು ಕುಡಚಿ ಕ್ಷೇತ್ರದ ಶಾಸಕ ಪಿ ರಾಜೀವ ಅವರಿಗೆ ಜೈಕಾರ ಹಾಕುವ ಮೂಲಕ ಗ್ರಾಮಸ್ಥರು ಸಂಭ್ರಮಿಸಿದರು.

ಈ ವೇಳೆ ನಿಲಜಿ ಗ್ರಾಮದ ಬಿಜೆಪಿ ಮುಖಂಡರಾದ ನರಸು ತುಳಸಿಗೇರಿ ಮಾತನಾಡಿ, ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಂತಸ ವ್ಯಕ್ತಪಡಿಸಿದರು.

ಈ ವೇಳೆ ನಿಲಜಿ ಗ್ರಾಮದ ಇನ್ನೋರ್ವ ಬಿಜೆಪಿ ಶಿವಾಜಿ ಚೌಹಾಣ ಮಾತನಾಡಿ, ಬಿಜೆಪಿ ಅಭಿವೃದ್ಧಿಪರ ಯೋಜನೆಗಳು ಗೆಲುವಿನಲ್ಲಿ ಸಹಕಾರಿಯಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಪಂಚಾಯತ ಸದಸ್ಯರಾದ ಸಂತೋಷ ಮೋರೆ, ಮಹಾದೇವ ಪಾಟೀಲ, ಪ್ರಿಯಾಂಕಾ ಕಾಂಬಳೆ, ಸುರೇಖಾ ಮಗದುಮ್, ಅಶ್ವಿನಿ ದೇವಮಾನೆ, ಸುರೇಶ ಹಸರೆ, ಲೀಲಾವತಿ ಸನದಿ, ಪಾರ್ವತಿ ವಾಸ್ತಿ, ಉಮೇಶ ಕಾಂಬಳೆ, ಬಸಗೌಡ ಪಾಟೀಲ, ಮಾರುತಿ ಮೋರೆ, ರಾಜು ಪಾಟೀಲ, ಮಲ್ಲಪ್ಪ ಕಾಂಬಳೆ, ಪ್ರದೀಪ ಪಾಟೀಲ, ಭೀಮಪ್ಪ ಅಕ್ಕೆನ್ನವರ, ಮಿಥುನ ಕಾಂಬಳೆ, ವಿಲಾಸ ಪಾಟೀಲ, ರವೀಂದ್ರ ಪಾಟೀಲ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!