hubbali

ಧಾರವಾಡದ ಇಟಿಗಟ್ಟಿ ಬೈಪಾಸ್ಅಗಲೀಕರಣಕ್ಕೆ ಗಡವು : ಪಿ.ಎಚ್ ನಿರಲಕೇರಿ

Share

ಧಾರವಾಡದ ಇಟಿಗಟ್ಟಿ ಬೈಪಾಸ್ ಬಳಿ ರಸ್ತೆಯಲ್ಲಿ ಇತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬದ ಸದಸ್ಯರು, ದಾವಣಗೆರೆ ಹಾಗೂ ಹುಬ್ಬಳ್ಳಿ ಧಾರವಾಡ ನಾಗರಿಕ ಸುರಕ್ಷತಾ ವೇದಿಕೆಯ ವತಿಯಿಂದ ಫೆ.6 ರಂದು ಬೆಳಿಗ್ಗೆ 11 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ವಕೀಲ ಪಿ.ಎಚ್ ನಿರಲಕೇರಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ,ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯ ಧೋರಣೆಗೆ ಅಮಾಯಕ ಜೀವಗಳು ಬಲಿಯಾದವು. ಈ ಹಿನ್ನೆಲೆಯಲ್ಲಿ ಮೃತತ ಆತ್ಮಕ್ಕೆ ಶಾಂತಿ ಸಿಗಬೇಕು ಎಂಬ ದೃಷ್ಟಿಯಿಂದ ಈ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಇಂತಹ ಅವಘಡಗಳ ಕುರಿತು ಜನಜಾಗೃತಿಯನ್ನು ಮೂಡಿಸಲಾಗುವುದು ಮತ್ತು ಯಾರು ಇಂತಹ ಕೃತ್ಯಕ್ಕೆ ಕಾರಣ ವಾಗಲು ಕಾರಣಿಬೂತರು ಅಂತರ ಮೇಲೆ ಕಾನೂನು ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಬೈಪಾಸ್ ಅಗಲೀಕರಣಕ್ಕೆ ಗಡವು ನೀಡಿದರು. ಹುಬ್ಬಳ್ಳಿ ಧಾರವಾಡ ನಡುವಿನ ಬೈಪಾಸ್ ರಸ್ತೆ ಅಗಲೀಕರಣ ಮಾಡಬೇಕು ಈ ರಸ್ತೆಯ ಚತುಷ್ಪತಿ ಅಥವಾ ಅಷ್ಟಪತವನ್ನಾಗಿ ಪರಿವರ್ತನೆ ಮಾಡಲು ಮುಂದಾಗಬೇಕು.‌ ಈ ಕುರಿತು ಮಾ18 ರೊಳಗೆ ಅಗತ್ಯ ಕ್ರಮಕೈಗೋಳ್ಳದಿದ್ದರೆ ಕಾನೂನು ಹೋರಾಟ ಜೊತೆಗೆ ಜನಜಾಗೃತಿ ಹೋರಾಟ್ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಶ್ರೀಶೈಲಗೌಡ ಕಮತರ, ವೈದ್ಯ ಜೆ.ಎಂ.ಜಾಡರ ಇದ್ದರು.

Tags:

error: Content is protected !!