ಕೆಎಲ್‌ಇ ಸಂಸ್ಥೆಗೆ 35 ವರ್ಷಗಳ ಹಿಂದೆಯೇ ಮೂರು ಸಾವಿರ ಮಠದ ಆಸ್ತಿಯನ್ನ ನೀಡಲಾಗಿದೆ. ಈ ಹಿಂದಿನ ಸ್ವಾಮೀಜಿಗಳು ಆಸ್ತಿಯನ್ನ ಬಿಟ್ಟು ಕೊಟ್ಟಿದ್ದಾರೆ. ದಿಂಗಾಲೇಶ್ವರ ಶ್ರೀಗಳು ಪ್ರತಿ ಹೆಜ್ಜೆಯಲ್ಲಿ ತಪ್ಪುತ್ತಿದ್ದಾರೆ ಎಂದು ಉದ್ಯಮಿ ವಿಜಯ ಸಂಕೇಶ್ವರ ದಿಂಗಾಲೇಶ್ವರ ಸ್ವಾಮೀಜಿ ವಿರುದ್ದ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು ಮೂರುಸಾವಿರ ಮಠಕ್ಕೆ ಅವರೇ ಮುಂದಿನ ಸ್ವಾಮೀಜಿಯಂದು ಮುಜಗೂ ಶ್ರೀಗಳ ಹೇಳ್ತಾ ಇದ್ದಾರೆ.ದಿಂಗಾಲೇಶ್ವರ ಶ್ರೀಗಳು ಬಾಳೆಹೊಸರು ಮಠದ 1 ಕೋಟಿ 30 ಲಕ್ಷ ರೂಪಾಯಿ ಹಣವನ್ನ ಮೂರು ಸಾವಿರ ಮಠಕ್ಕೆ ಖರ್ಚು ಮಾಡಿದ್ದೇನೆ. ಎನ್ನುತ್ತಿದ್ದಾರೆ. ಆ ಮಠದ ಹಣವನ್ನ ಈ ಮಠಕ್ಕೆ ಖರ್ಚು ಮಾಡುವ ಅಧಿಕಾರಿವನ್ನ ದಿಂಗಾಲೇಶ್ವರ ಶ್ರೀಗಳಿಗೆ ಯಾರು ಕೊಟ್ಟರು.
ಮೂರು ಸಾವಿರ ಮಠಕ್ಕೆ ಒಬ್ಬರೇ ಸ್ವಾಮೀಜಿಗಳು.
ಕೆಎಲ್‌ಇ ಸಂಸ್ಥೆಗೆ ನೀಡಲಾದ ಮೂರು ಸಾವಿರ ಮಠದ ಭೂಮಿಯ ಬೆಲೆ 40 ಲಕ್ಷ ಆಗುತ್ತದೆ.ದಿಂಗಾಲೇಶ್ವರ ಶ್ರೀಗಳು 500 ಕೋಟಿ ರೂಪಾಯಿ ಎಂದು ಹೇಳುತ್ತಿದ್ದಾರೆ. ದಿಂಗಾಲೇಶ್ವರ ಶ್ರೀಗಳಿಗೆ ನಾ ಇವತ್ತು ಕೇಳ್ತೆನಿ ನೀವು 100 ಕೋಟಿ ರೂಪಾಯಿ ಕೊಟ್ಟುಬಿಡಿ, ಮಠದ ಆಸ್ತಿಯನ್ನ ಮಠಕ್ಕೆ ನಾನು ಬಿಟ್ಟು ಕೊಡಿಸುತ್ತೇನೆ. ಮೂರು ಸಾವಿರ ಮಠದ ಸ್ವಾಮೀಜಿಗಳಿಗೆ ಮತ್ತು ಪ್ರಭಾಕರ್ ಕೊರೆಯವರಿಗೆ ರೀಕ್ವೆಸ್ಟ್ ಮಾಡಿ ಆಸ್ತಿ ಬಿಡಿಸಿಕೊಡ್ತೆನಿ. ಈ ಇಬ್ಬರು ಸ್ವಾಮೀಜಿಗಳು ಒಂದು ನಿರ್ಣಯವನ್ನ ತೆಗೆದುಕೊಳ್ಳಬೇಕು.ಇದಕ್ಕೆ ನಮ್ಮ ಸಮಾಜ ಒಪ್ಪುತ್ತದೆ, ಅಂದಾಗ ಮಾತ್ರ ಮೂರು ಸಾವಿರ ಮಠದ ವಿವಾದ ಅಂತ್ಯವಾಗಲು ಸಾಧ್ಯ ಎಂದರು.
ಹುಬ್ಬಳ್ಳಿಯ ಮೂರು ಸಾವಿರ ಮಠದ ಮುಜಗೂ ಶ್ರೀಗಳು ಸಮರ್ಪಕವಾಗಿ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ.ಮೂಜಗು ಶ್ರೀಗಳು ಯಾವುದೇ ಭಕ್ತರ ಕೈಗೆ ಸಿಗುತ್ತಿಲ್ಲ.
ಭಕ್ತರ ಜೊತೆ ನಿಂತು ಮಾತನಾಡುವ ಸೌಜನ್ಯವನ್ನ ತೋರಿಸುತ್ತಿಲ್ಲ ಎಂದು ಸ್ಬಾಮೀಜಿಗಳ ವಿರುದ್ದ ವಾಗ್ದಾಳಿ ನಡೆಸಿದರು.
ದಿಂಗಾಲೇಶ್ವರ ಶ್ರೀಗಳನ್ನ ಪೀಠಾಧಿಪತಿ ಮಾಡಲು ಮೂಜಗು ಶ್ರಿಗಳು ಒಪ್ಪಿಗೆ ಸೂಚಿಸಿದ್ದರು. ನಾನು ಉನ್ನತ ಮಟ್ಟದ ಸಮಿತಿಯಲ್ಲಿರುವಾಗ ಮಠದ ಅಭಿವೃದ್ಧಿ ಬಗ್ಗೆ ಸಭೆ ನಡೆಸಿ ಎಂದಾಗ ಯಾರೂ ಮುಂದೆ ಬರಲಿಲ್ಲ. ಈ ಸ್ವಾಮೀಜಿಗಳು ಯಾವಾಗ ನೋಡಿದ್ರು ಅಳ್ತಾನೆ ಇರ್ತಾ ಇದ್ದರು. ಸ್ವಾಮೀಜಿಗಳು ಸಾಲದ ಬಗ್ಗೆ ದೊಡ್ಡ ದೊಡ್ಡ ಲಿಸ್ಟ್ ಕೊಡ್ತಾ ಇದ್ದರು.
ಇದರಿಂದ ನಾ ಬೇಸತ್ತು ಉನ್ನತ ಮಟ್ಟದ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.ಅಲ್ಲಿಂದ ಇಲ್ಲಿಯವರೆಗೂ ಆ ಮಠಕ್ಕೆ ಕಾಲಿಟ್ಟಿಲ್ಲ, ನಾನು ಮಠದ ಭಕ್ತ ಅಷ್ಟೇ…
ದಿಂಗಾಲೇಶ್ವರ ಶ್ರೀಗಳು ಕೀಳುಮಟ್ಟದ ರಾಜಕಾರಣಿಗಳು ಎನ್ನುತ್ತಿದ್ದಾರೆ.
ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದು ನಾವಲ್ಲ, ಮೂಜಗು ಶ್ರೀಗಳೆ ಸಮಿತಿ ರಚೆನೆ ಮಾಡಿದ್ದಾರೆ.ಉನ್ನತ ಮಟ್ಟದ ಸಮಿತಿ ರಚನೆಯಾಗಿದ್ದು ನಮ್ಮಿಂದಲ್ಲ, ಸ್ವಾಮೀಜಿಗಳಿಂದ. ನಾವ್ಯಾರು ಮಠದ ಉನ್ನತ ಮಟ್ಟದ ಸಮಿತಿಯಲ್ಲಿ ಹೊಕ್ಕೊಂಡಿಲ್ಲಾ, ಅವರೇ ಒತ್ತಾಯ ಪೂರ್ವಕ ಮಾಡಿದ್ದು. ಇವತ್ತು ಕಾವಿಧಾರಿಗಳು ಮಾತನಾಡುವುದನ್ನ ಕಲಿಬೇಕಾಗಿದೆ. ಜವಬ್ದಾರಿಯುತವಾಗಿ, ಕೆಟ್ಟ ಭಾಷೆ ಗಳನ್ನ ಬಳಸದೆ ಮಾತನಾಡಬೇಕು. ಸಿಎಮ್‌ಗೂ ಏಕವಚನದಲ್ಲಿ ಮಾತನಾಡುತ್ತಿದ್ದಾರೆ, ನಮ್ಮಿಂದ ಸರ್ಕಾರ, ಸರ್ಕಾರ ಕೆಡವುತ್ತೆವೆ ಎನ್ನುತ್ತಿದ್ದಾರೆ.
ಈ ತರಹದ ಬೆಳವಣಿಗೆಯಿಂದ ಕರ್ನಾಟಕ ಜನತೆಯ ಮನಸ್ಸು ಬಹಳ ನೊಂದಿದೆ. ಯಾವುದೇ ಹೋರಾಟಗಳು ಲಕ್ಷ್ಮಣ ರೇಖೆ ದಾಟಬಾರದು. ಇಡಿ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಭ್ರಷ್ಟಾಚಾರ ಅತಿ ಹೆಚ್ಚು.
* ಕೀಳು ಮಟ್ಟದ ಜಾತಿ, ಅದರ ವಿವಾದ ವಿಧಾನಸಭೆ ಒಳಗೆ, ಹೊರಗಡೆ, ಮಠದ ಒಳಗೆ, ಹೊರಗೆ ಇರಬಹುದು ಇದು ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರ ಇದನ್ನ ನಾನು ಬಹಳ ದುಖದಿಂದ ಹೇಳ್ತೆನಿ ಎಂದರು.