ಆರ್. ಸಿ ಹಿರೇಮಠ ನಿರ್ದೇಶನದ ದರ್ಬಾರ್ ಚಲನಚಿತ್ರ ಎಪ್ರಿಲ್ ತಿಂಗಳಿನಿಂದ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎಂದು ಚಿತ್ರದ ನಿರ್ದೇಶಕ ಆರ್ ಸಿ.ಹಿರೇಮಠ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಕಲಾವಿದರನ್ನು ಬಳಸಿಕೊಂಡು ದರ್ಬಾರ್ ಶೀರ್ಷಿಕೆ ಅಡಿಯಲ್ಲಿ ಕನ್ನಡ ಸಿನಿಮಾ ನಿರ್ಮಾಣ ಮಾಡಿತ್ತಿದ್ದು,ಚಿತ್ರದ ಕಥೆಯು ಸಮಾಜದಲ್ಲಿ ಮನೆಯ ಜವಾಬ್ದಾರಿ ಇಲ್ಲದ ಕೆಲವು ಯುವಕರ ಹಾಗೂ ಪ್ರೀತಿಯಲ್ಲಿನ ಸ್ವಾರ್ಥ, ಮಕ್ಕಳ ಹೆತ್ತ ತಂದೆ ತಾಯಿಯರ ನೋವು ನಲಿವು ಚಿತ್ರದ ಸಾರಾಂಶವಾಗಿದೆ, ಇನ್ನೂ ಚಿತ್ರದಲ್ಲಿ ನಾಲ್ಕು ಪೈಟ್, ನಾಲ್ಕು ಹಾಡು,ಉತ್ತರ ಕರ್ನಾಟಕ ಭಾಗದ ತಾರಾ ಬಳಗವಿದೆ ಎಂದರು, ಚಿತ್ರದಲ್ಲಿ ನಾಯಕನಾಗಿ ಮಲ್ಲು ನಾಯಕ್,ನಾಯಕಿಯಾಗಿ ಜ್ಯೋತಿ ಪತ್ತಾರ,ಪಲ್ಲವಿ,ಮಂಜುನಾಥ್ ಪಿಸೇ ಸೇರಿದಂತೆ ಇನ್ನಿತರ ಕಲಾವಿದರು ನಟನೆ ಮಾಡುತ್ತಿದ್ದಾರೆ ಎಂದರು