ತಂಗಿಯ ಮಗಳು ತೊಟ್ಟಿಲು ಹಾಕುವ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ವೇಳೆ ತಾಯಿ ಹಾಗೂ ಇಬ್ಬರು ಮಕ್ಕಳು ಕಾಣೆಯಾಗಿರುವ ಘಟನೆ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ವಾ.ಓ: ಧಾರವಾಡದ ಕಲ್ಯಾಣ ನಗರದ 9ನೇ ಕ್ರಾಸ್‍ನ ನಿವಾಸಿ ಹೀನಾಕೌಸರ ಮೊಹಿಯೋದ್ದೀನ್ ಶಿಬಾರಗಟ್ಟಿ(30), ಮಕ್ಕಳಾದ ಅಹದ್(7), ಅಕ್ಸಾ(6) ಕಾಣೆಯಾಗಿರುವವರು. ಜನವರಿ 17ರಂದು ಧಾರವಾಡದಿಂದ ಖಾನಾಪುರದಲ್ಲಿ ತಮ್ಮ ತಂಗಿಯ ಮಗಳ ತೊಟ್ಟಿಲು ಹಾಕುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಈ ಮೂವರು ಬಳಿಕ ತೊಟ್ಟಿಲು ಹಾಕುವ ಕಾರ್ಯಕ್ರಮ ಮುಗಿಸಿ ಜ.21ರಂದು ಮರಳಿ ಧಾರವಾಡಕ್ಕೆ ಬರಲು ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬಸ್‍ನಲ್ಲಿ ಕುಳಿತಿದ್ದಾರೆ. ಇದಾದ ಬಳಿಕ ಅವರು ಮನೆಗೆ ಮರಳಿ ಬಂದಿಲ್ಲ ಎಂದು ಕಾಣೆಯಾಗಿರುವ ಮಹಿಳೆಯ ಪತಿ ಮೊಹಿಯೋದ್ದೀನ್ ಮಹ್ಮದ್‍ಹನೀಫ್ ಶಿಬಾರಗಟ್ಟಿ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ಬಗ್ಗೆ ಯಾರಿಗಾದ್ರೂ ಗುರುತು ಪತ್ತೆಯಾದ್ರೆ ಮಾರ್ಕೆಟ್ ಠಾಣೆ ಪೊಲೀಸರಿಗೆ ತಿಳಿಸುವಂತೆ ಕೇಳಿಕೊಳ್ಳಲಾಗಿದೆ.