Belagavi

ಟ್ರೇನ್‍ನಲ್ಲಿ ಬಿಟ್ಟಿದ್ದ ಬ್ಯಾಗ್ ಪತ್ತೆ ಹಚ್ಚಿ..ಮಾಲೀಕರಿಗೆ ಮರಳಿಸಿದ ಬೆಳಗಾವಿ ರೈಲ್ವೇ ಪೊಲೀಸ್

Share

ಮೈಸೂರು-ಅಜ್ಮೀರ್ ಟ್ರೇನ್‍ನಲ್ಲಿ ಬೆಳೆ ಬಾಳುವ ವಸ್ತುಗಳನ್ನು ಹೊಂದಿದ್ದ ಬ್ಯಾಗ್‍ಗಳನ್ನು ಬಿಟ್ಟು ಇಳಿದಿದ್ದ ಬೆಳಗಾವಿಯ ನಿವಾಸಿಯೊಬ್ಬರಿಗೆ ವಸ್ತುಗಳ ಸಮೇತ ಬೆಳಗಾವಿ ರೈಲ್ವೇ ಪೊಲೀಸರು ಬ್ಯಾಗ್ ಮುಟ್ಟಿಸಿದ್ದಾರೆ.

ಹೌದು ಇದೇ ಫೆ.5ರಂದು ಮೈಸೂರು ಟೂ ಅಜ್ಮೀರ್ ಟ್ರೇನ್‍ನಲ್ಲಿ ಬೆಳಗಾವಿಗೆ ಬಂದಿಳಿದಿದ್ದ ನಗರದ ಕ್ಯಾಂಪ್ ಪ್ರದೇಶದ ಅಯೂಬ್ ಚೌಧರಿ ಎಂಬುವವರು 2 ಲಕ್ಷ 9 ಸಾವಿರ ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ಎರಡು ಬ್ಯಾಗ್‍ಗಳನ್ನು ಟ್ರೇನ್‍ನಲ್ಲಿ ಬಿಟ್ಟಿದ್ದರು. ಈ ಸಂಬಂಧ ರೈಲ್ವೇ ಪೊಲೀಸರಿಗೆ ಅಯೂಬ್ ಚೌಧರಿ ದೂರು ದಾಖಲಿಸಿದ್ದರು. ಇದಾದ ಬಳಿಕ ಎರಡೂ ಬ್ಯಾಗ್‍ಗಳನ್ನು ಪತ್ತೆ ಹಚ್ಚುವಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದು, ರವಿವಾರ ಅಯೂಬ್ ಚೌಧರಿಗೆ ಅವರಿಗೆ ರೈಲ್ವೇ ಪಿಎಸ್‍ಐ ಸತ್ಯಪ್ಪ ಎಮ್, ಎಎಸ್‍ಐ ನಟರಾಜ್ ಟಿ, ಸಿಬ್ಬಂದಿಗಳಾದ ಹಣಮಂತ ಸಪ್ತಸಾಗರ, ಸುರೇಂದ್ರ ವಿಭೂತಿ ಹಾಗೂ ಮಲ್ಲಿಕ್ ಮುಲ್ಲಾ ಅವರು ಬ್ಯಾಗ್‍ಗಳನ್ನು ಮರಳಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಈ ವೇಳೆ ರೈಲ್ವೇ ಪೊಲೀಸರಿಗೆ ಅಯೂಬ್ ಚೌಧರಿ ಅವರು ಧನ್ಯವಾದ ಸಲ್ಲಿಸಿದರು.

 

Tags:

error: Content is protected !!