ಖಾನಾಪೂರ ತಾಲೂಕಿನ ಜಾಂಬೋಟಿ ಮತ್ತು ನೀಲಾವಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಬಹಳ ತುರುಸಿನಿಂದ ನಡೆದಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಧನಶ್ರೀ ಸರ್ ದೇಸಾಯಿ ಜಾಂಬೋಟ್ಟಕರ್ ಅಧ್ಯಕ್ಷರಾಗಿ ಹಾಗೂ ರಾಜನ್ ಕುಡ್ತುರ್ಕರ್ ಉಪಾಧ್ಯಕ್ಷರಾಗಿ ಹತ್ತು ಜನ ಸದಸ್ಯರ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಯಾದರು.

: ಖಾನಾಪೂರ ತಾಲೂಕಿನ ಜಾಂಬೋಟಿ ಮತ್ತು ನೀಲಾವಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯು ಸಂಘದ ಶೇರುದಾರರ ನಡುವಿನ ಸ್ಪರ್ಧೆಗಿಂತ ಹೆಚ್ಚಿನ ಮಹತ್ವ ಪಡೆದಿತ್ತು. ಬಿಜೆಪಿ ಹಾಗೂ ಎಂಇಎಸ್ ನಡುವೆ ತೀವ್ರ ಪೈಪೋಟಿ ನಡೆದಿತ್ತು.ಬಿಜೆಪಿ ಪಕ್ಷದಿಂದ ನೇತೃತ್ವ ವಹಿಸಿದ ರಾಜ್ಯ ಮಹಿಳಾ ಕಾರ್ಯಕಾರಣಿ ಸದಸ್ಯೆ ಧನಶ್ರೀ ಸರದೇಸಾಯಿ ಜಾಂಬೋಟಕರ್ ಹಾಗೂ ಎಂಇ ಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ್ ತೀವ್ರ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಈ ಚುನಾವಣೆಯಲ್ಲಿ ಒಟ್ಟು 12 ಸದಸ್ಯರ ಆಯ್ಕೆ ನಡೆದಿದೆ.
ಇದರಲ್ಲಿ ಧನಶ್ರೀ ಸರದೇಸಾಯಿ ಬಣದಿಂದ 10 ಜನ ಗೆಲುವನ್ನು ಪಡೆದಿದ್ದಾರೆ. ಮಾಜಿ ಶಾಸಕ ಅರವಿಂದ್ ಪಾಟೀಲ್ ಬಣದಿಂದ ಇಬ್ಬರು ಗೆಲುವು ಪಡೆದಿದ್ದಾರೆ. ಆಯ್ಕೆಯಾದ 12 ಜನ ಸದಸ್ಯರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮತ್ತು ಮತ್ತೊಬ್ಬರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಚುನಾವಣೆ ನಡೆಯಿತು.
ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಧನಶ್ರೀ ಸರ್ ದೇಸಾಯಿ ಜಾಂಬೋಟ್ಟಕರ್ ಅಧ್ಯಕ್ಷರಾಗಿ ಹಾಗೂ ರಾಜನ್ ಕುಡ್ತುರ್ಕರ್ ಉಪಾಧ್ಯಕ್ಷರಾಗಿ ಹತ್ತು ಜನ ಸದಸ್ಯರ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಯಾದರು.