ಅಥಣಿ ತಾಲೂಕಿನ ಜಕ್ಕರಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸಿದ್ದು ಖೋತ, ಉಪಾಧ್ಯಕ್ಷರಾಗಿ ರೇಷ್ಮಾ ರಾಮಚಂದ್ರ ಕಾಂಬಳೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಚಿವ ಶ್ರೀಮಂತ ಪಾಟೀಲ್ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಬಿ.ಆರ್.ಕಾಂಬಳೆ ಅವರು ಅಧ್ಯಕ್ಷರಾಗಿ ಸಿದ್ದು ಖೋತ, ಉಪಾಧ್ಯಕ್ಷರಾಗಿ ರೇಷ್ಮಾ ರಾಮಚಂದ್ರ ಕಾಂಬಳೆ ಅವರ ಅವಿರೋಧ ಆಯ್ಕೆ ಕುರಿತು ಘೋಷಣೆ ಮಾಡಿದರು.
ಬಳಿಕ ಪಿಡಿಓ ಸಚಿನ್ ಪಾಟೀಲ್ ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಸತ್ಕರಿಸಿದರು. ಈ ವೇಳೆ ಜಿ.ಪಂ.ಸದಸ್ಯ ವಿನಾಯಕ ಬಾಗಡಿ, ತಾ.ಪಂ.ಸದಸ್ಯ ಧೋಂಡಿರಾಮ್ ಅವಳೇಕರ್, ಮುಖಂಡರಾದ ಭಾನುದಾಸ್ ಖೋತ, ತಾತೋಬಾ ನಿಕಮ್, ಅಜಿತ್ ಖೋತ್, ನಾರಾಯಣ ಖೋತ, ಸಂಜಯ್ ಸಾಳುಂಖೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.