ತೀವ್ರ ಕುತೂಹಲ ಕೆರಳಿಸಿದ್ದ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರನ್ನು ಗುಪ್ತ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿ ರಾಮು ರಾಠೋಡ ಸಮ್ಮುಖದಲ್ಲಿ 10 ಜನ ನೂತನ ಸದಸ್ಯರನ್ನು ಒಳಗೊಂಡ ಸುಟ್ಟಟ್ಟಿ ಗ್ರಾಮ ಪಂಚಾಯತಿಯ ಸಭಾ ಭವನದಲ್ಲಿ ಎಸ್‍ಸಿ ಮೀಸಲಾತಿ ಅಧ್ಯಕ್ಷ ಮತ್ತು ಅ ವರ್ಗ ಮಹಿಳಾ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ತೀವ್ರ ಕುತುಹಲ ಹಾಗೂ ಹಣಾಹಣಿಯಿಂದ ಕೂಡಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ 5-5 ಮತಗಳನ್ನು ಪಡೆದು ಸಮಬಲ ಸಾಧಿಸಿದ ನಂತರ ಚೀಟಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಈ ವೇಳೆ ಕಸ್ತೂರಿ ಮಹಾದೇವ ಅಕ್ಕೆನ್ನವರ ಅಧ್ಯಕ್ಷರಾಗಿ ಆಯ್ಕೆಯಾದ್ರೆ ಶಾಂತಾ ವಾಮನ ಹಟ್ಟಿಮನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
: ಈ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕುಡಚಿ ಪಿಎಸ್‍ಐ ಶಿವರಾಜ್ ದರಿಗೊಂಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸದಾಶಿವ ದಳವಾಯಿ, ಸದಾಶಿವ ದೆಶಿಂಗೆ, ವಕೀಲರಾದ ರಾಜು ಶಿರಗಾಂವೆ, ಮಹೇಶ ಕೊರವಿ, ರಾಜು ಭನಗೆ, ಜಯವೀರ ಬಾಲೋಜಿ, ಸದಸ್ಯರಾದ ಶಿವಾನಂದ ಹೆಗಡೆ, ಬಸಪ್ಪ ಹೆಗಡೆ, ಸಂಗೀತಾ ಭಜಂತ್ರಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.