ಹೌದು ಬಂತು, ಬಂತು ಟ್ರೇನು ಬಂತು ಸರಿಯಿರಿ…… ಅದು ಎಲ್ಲಿ ಅಂತೀರಾ ನೋಡಿ ಖಾನಾಪೂರ ತಾಲೂಕಿನ ಚಾಪಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ಆಕಾರದಲ್ಲಿ

ಹೌದು ಒಬ್ಬ ಶಿಕ್ಷಣ ಪ್ರೇಮಿ ಮನಸು ಮಾಡಿದರೆ ವಿದ್ಯಾರ್ಥಿ ಗಳಿಗೆ ಸುಂದರ, ಸುಸಜ್ಜಿತ ವಾತಾವರಣದಲ್ಲಿ ಅಭ್ಯಾಸ ಮಾಡಲು ಅನುವು ಮಾಡಿ ವಿದ್ಯಾರ್ಥಿಗಳಿಗೆ ಒಂದು ಆಕರ್ಷಿಕ ಶಾಲೆ ಕೈ ಬಿಸಿ ಕರೆಯುತ್ತಿರುಹಾಗೆ ಮಾಡಿದ್ದಾರೆ. ಇದೇ ಇಲ್ಲಿ ನಡೆದಿರುವುದು.ಶಿಕ್ಷಣ ಪ್ರೇಮಿ ನೂತನ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಯಳ್ಳೂರಕರ ಅವರು ತಮ್ಮ ಮಗಳು ಕುಮಾರಿ ಲಲಿತಾ ಇವಳ ಹದಿಮೂರನೆಯ ಜನ್ಮದಿನಾಚರಣೆ ಅಂಗವಾಗಿ ಶಾಲೆಗೆ ರೇಲ್ವೆ ಲೂಕ್ ನಂತಹ ಕಲರ್ ಮಾಡಿ ಶೈಕ್ಷಣಿಕ ಪ್ರಗತಿಗೆ ಮುಂದಾಗಿ ಸೇವೆ ಮಾಡಿದ್ದಾರೆ. ನಾಗರಾಜ್ ಯಳ್ಳೂರಕರ ಇವರು ಚಾಪಗಾಂವ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಗೊಂಡಿದ್ದು.ಇದರ ಮೊದಲು ಕೂಡಾ ಮಗಳ ಹುಟ್ಟು ಹಬ್ಬದ ನಿಮಿತ್ಯ ಮರಾಠಿಶಾಲೆಗೆ ಇದೇ ತರಹ ಟ್ರೇನ್ ಲೂಕ್ ಮಾಡಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಾಧ್ಯಾಪಕ ಎಸ್.ಆರ್.ಮಾದಿಗಾರ ಅವರು ಚಾಪಗಾಂವ ಗ್ರಾಮದ.ಹಿರಿಯರಾದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಯಳ್ಳೂರಕರ ಅವರು ನಮ್ಮ ಶಾಲೆಗೆ ಸುಣ್ಣ ಬಣ್ಣ ಬಳಿದು ಟ್ರೇನ್ ಲೂಕ್ ನೀಡಿದ್ದಾರೆ. ಒಂದೇ ಆವರಣದಲ್ಲಿ ಮರಾಠಿ ಮತ್ತು ನಮ್ಮ ಕನ್ನಡ ಶಾಲೆ ಇದೆ ಇದರ ಮೊದಲು ಕೂಡಾ ಅವರು ಮರಾಠಿ ಶಾಲೆಗೆ ಈ ತರಹ ಮಾಡಿದ್ದಾರೆ ಅವರಿಗೆ ಎಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಶಿಕ್ಷಕ ಎಂ.ಎ.ಯಮೋಜಿ ಅವರು ಈ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಚಾಪಗಾಂವ ಗ್ರಾಮದ ಹಿರಿಯ ಮುಖಂಡ ಪಿರಾಜಿ ಕುರಾಡೆ ಮಾತನಾಡಿ ನಾಗರಾಜ ಯಳ್ಳೂರಕರ ಅವರು ಬಡ ಮದ್ಯಮ ಕುಟುಂಬದಿಂದ ಬಂದಿದ್ದಾದರೂ ತನ್ನ ವ್ಯಕ್ತಿತ್ವದಿಂದ ಶೈಕ್ಷಣಿಕ ಕೊಡುಗೆ ನೀಡುತ್ತಾ ಬಂದಿದ್ದಾರೆ ಕಳೆದ ಬಾರಿಯೂ ತನ್ನ ಮಗಳ ಜನ್ಮದಿನಾಚರಣೆ ಅಂಗವಾಗಿ ಒಂದು ಶಾಲೆಗೆ ಇಂತಹ ಟ್ರೇನ್ ಲೂಕ್ ಮಾದರಿ ಬಣ್ಣ ನೀಡಿದರು.ಈ ಸಲ ಜರುಗಿದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿದಾದರೂ ಶೈಕ್ಷಣಿಕ ದೃಷ್ಟಿಯಿಂದ ಶ್ರಮಿಸುತ್ತಿದ್ದಾರೆ ಇದಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.