ಟ್ರಾಫಿಕ್ ಪೋಲೀಸರು ಎಂದಾಕ್ಷಣವೇ ಸವಾರರು ದಿಕ್ಕಾಪಾಲಾಗಿ ವಾಹನ ಸಮೇತ ಪರಾರಿಯಾಗ್ತಾರೆ. ಇನ್ನು ಇನ್ನಿಲ್ಲದ ಟ್ರಾಫಿಕ್ ರೂಲ್ಸ್ ಹೇಳಿ ದಂಡ ವಸೂಲಿ ಮಾಡ್ತಾರೆ ಎನ್ನುವ ಮಾತು ಕೇಳಿ ಬರುತ್ತವೆ. ಆದ್ರೇ, ಇಲ್ಲೊಬ್ಬರು ಟ್ರಾಫಿಕ್ ಪಿಎಸ್ಐನವರು ಮಾಡಿರುವ ಕಾರ್ಯಕ್ಕೆ ನೆಟ್ಟಿಗರು ಹಾಗೂ ಸ್ಥಳೀಯರು ಶಹಬಾಸ್ ಎನ್ನುತ್ತಿದ್ದಾರೆ.
ಗುಮ್ಮಟನಗರಿ ವಿಜಯಪುರ ನಗರದ ಒಂದಿಷ್ಟು ರಸ್ತೆಗಳು ಹಾಳಾಗಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರ ಬಲಿಗಾಗಿ ಗುಂಡಿಗಳು ಕಾದಿವೆ. ಇಂತಹ ರಸ್ತೆ ಗುಂಡಿಗಳಲ್ಲಿ ವಾಹನ ಸವಾರರಿಗೆ ಅಪಘಾತವಾಗದಂತೆ ವಿಜಯಪುರ ಟ್ರಾಫಿಕ್ ಪಿಎಸ್ಐ ಸಂಜಯ ಕಲ್ಲೂರ ಸ್ವತಃ ತಾವೇ ಮುಂದೆ ನಿಂತು ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ.
ನಗರದ ಬಸ್ ನಿಲ್ದಾಣ, ಕೆಸಿ ಮಾರುಕಟ್ಟೆ, ಸರಾಫ್ ಬಜಾರ ರಸ್ತೆಯಲ್ಲಿ ಹೆಚ್ಚಾಗಿರುವ ಗುಂಡಿಗಳಿಗೆ ಮುಚ್ಚಿಸುವ ಮೂಲಕ ಪಿಎಸ್ಐ ಸಂಜಯ್ ಸಾಹೇಬರು ಮಾನವೀಯತೆ ಮೆರೆದಿದ್ದಾರೆ. ಇದರಿಂದ ಸ್ಥಳೀಯರು ಹಾಗೂ ನೆಟ್ಟಿಗರು ಫುಲ್ ಫೀದಾ ಆಗಿದ್ದಾರೆ…