ಬೆಳಗಾವಿಯ ಖಾಸ್‍ಬಾಗ್‍ನ ಶೃಂಗೇರಿ ಕಾಲೋನಿಯ ಮನೆಯೊಂದರಲ್ಲಿ 50 ಗ್ರಾಂ ಚಿನ್ನಾಭರಣ ದೋಚಿಕೊಂಡು ಖದೀಮರು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು. ಮಹೇಶ ಕಾಂಬಳೆ ಅವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಆಗಿದ್ದು. ನಿನ್ನೆ ರಾತ್ರಿ ಮನೆ ಲಾಕ್ ಮಾಡಿ ಹೊರಗಡೆ ಹೋದ ಸಂದರ್ಭದಲ್ಲಿ ಮನೆಗೆ ಕನ್ನ ಹಾಕಿರುವ ಕಳ್ಳರು, ಮನೆ ಬಾಗಿಲು ಕೀಲಿ ಒಡೆದು, ತಿಜೋರಿಯಲ್ಲಿದ್ದ ನಕ್ಲೇಸ್, ಮಂಗಳಸೂತ್ರ ಸೇರಿ ಒಟ್ಟು 50 ಗ್ರಾಂ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ. ಶಾಹಪುರ ಠಾಣೆ ಸಿಪಿಐ ರಾಘವೇಂದ್ರ ಹವಾಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.