Khanapur

ಖಾನಾಪೂರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ

Share

ಹೌದು ಖಾನಾಪೂರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಜರುಗಿತು ‌.ಈ ಸಭೆಯಲ್ಲಿ ಪಟ್ಟಣದ ಹೆಚ್ಚುತೀರುವ ವಿಸ್ತರಣೆಯಿಂದ ಇಂಪ್ಪನಾಲ್ಕು ಗಂಟೆ ನೀರು ಪೂರೈಕೆಯ ಅಹವಾಲನ್ನು ಸರ್ಕಾರದ ಸಲ್ಲಿಸಲು ನಿರ್ಧರಿಸಲಾಯಿತು.ಈ ಸಭೆಯ ನಗರಾಧ್ಯಕ್ಷ ಮಜಹರ್ ಖಾನಾಪೂರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಸ್ಟೇಷನ್ ರಸ್ತೆ ಹಾಗೂ ಪಾರಿಶ್ವಾಡ ಕ್ರಾಸ್ ಬಳಿ ಅತಿಕ್ರಮಣ ಬಗ್ಗೆ ಗಂಭೀರವಾಗಿ ಚರ್ಚೆ ಜರುಗಿತು.ಇದರ ಬಗ್ಗೆ ಎಸಿ ಹಾಗೂ ತಾಹಶೀಲ್ದಾರ ಅವರು ಕಾನೂನು ಬಾಹಿರವಾಗಿ ಖುಕಾಗಳನ್ನು ತೆರವುಗೊಳಿಸುವ ಆದೇಶ ನೀಡಿದ್ದಾರೆ ಎಂಬುದನ್ನು ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಸಂಬಂಧಿಸಿದಂತೆ ಈ ರಸ್ತೆ ಸಾರ್ವಜನಿಕ ಲೋಕೋಪಯೋಗಿ ಇಲಾಖೆಯ ಸ್ವಾಧೀನದಲ್ಲಿ ಬರುತ್ತದೆ ಸಂಬಂಧಿತರಿಗೆ ಏಳು ದಿನಗಳ ಕಾಲ ನೋಟಿಸ್ ನೀಡಲಾಗಿದೆ.ಪಟ್ಟಣ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಅತಿಕ್ರಮಣ ತೆರವುಗೋಳಿಸುವ ಕಾರ್ಯ ಮಾಡಿ ಎಂಬ ಸೂಚನೆಯನ್ನು ನಗರಸೇವಕರು ನೀಡಿದರು.

ಕಳೆದ ಸಭೆಯಲ್ಲಿ ಮೋಟಾರ್ ಪಂಪಗಳ ದುರುಸ್ಥಿಯ ಖರ್ಚು ವೆಚ್ಚಗಳ ಬಗ್ಗೆ ವಿಷಯ ಪ್ರಸ್ತಾಪಿಸಿಕ್ಕೆ ದುರುಸ್ಥಿಯ ಖರ್ಚು ಬಹಳ ಬರುವುದರಿಂದ ಇದರ ಬದಲಿಗೆ ಹೊಸ ಮೋಟಾರ್ ಪಂಪಗಳ ಖರೀದಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಆದರೆ ಪುನಃ ಮೋಟಾರ್ ದುರುಸ್ಥಿಯ ಖರ್ಚು ತೋರಿಸಿದರಿಂದ ನಗರ ಸೇವಕ ರಫೀಕ್ ವಾರಿಮನಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ಮಾದಾರ,ಉಪನಗರಾಧ್ಷ ಲಕ್ಷ್ಮೀ ಅಂಕಲಗಿ,ನಗರಸೇವಕರಾದ ಅಪ್ಪಯ್ಯ ಕೊಡೋಳ್ಳಿ,ಮೇಘಾ ಕುಂದರಗಿ, ವಿನೋದ್ ಪಾಟೀಲ್,ತೊಹೀದ್ ಚಾಂದಖಾನವರ, ನಾರಾಯಣ ಮಯೇಕರ, ವಿನಾಯಕ ಕಲಾಲ, ಸೇರಿದಂತೆ ಇನ್ನಿತರ ನಗರಸೇವಕರ ಉಪಸ್ಥಿತರಿದ್ದರು.ಮುಖ್ಯಾಧಿಕಾರಿ ವಿವೇಕ್ ಬನ್ನೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದು ಸಭೆಯಲ್ಲಿ ಬಂದಿರುವ ಇನ್ನಿತರರು ಅಹವಾಲನ್ನು ಚರ್ಚಿಸಿ ಯೋಗ್ಯ ಕ್ರಮ ಕೈಕೋಳ್ಳುವ ಬಗ್ಗೆ ನಿರ್ಧಾರಿಸಿದರು.

Tags:

error: Content is protected !!