ಎರಡನೇ ಹಂತದ ಕೊವಿಡ್ ಲಸಿಕಾ ಅಭಿಯಾನದಲ್ಲಿ ಕೊರೋನಾ ಪ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಅನುಪಮ ಅಗರವಾಲ ಕೊವಿಶೀಲ್ಡ್ ಲಸಿಕೆ ಹಾಕಿಸಿಕೊಂಡರು.
ವಿಜಯಪುರ ಸರಕಾರಿ ಆಸ್ಪತ್ರೆಯ ಲಸಿಕಾ ಕೇಂದ್ರ ದಲ್ಲಿ ಲಸಿಕೆ ಪಡೆಯುವ ಮೊದಲು ಲಸಿಕೆ ಮೊದಲು ಕಂಪ್ಯೂಟರ್ ನಲ್ಲಿ ನೊಂದಾಯಿಸಿ ಲಸಿಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಎಸ್ಪಿ ಅನುಪಮ ಅಗರವಾಲಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ಸಾಥ್ ನೀಡಿದರು.
ಲಸಿಕೆ ಪಡೆದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿ ಇಂದಿನಿಂದ ಮೂರು ದಿನಗಳವರೆಗೆ ಕೊರೋನಾ ಪ್ರಂಟ್ ಲೈನ್ಸ್ ವಾರಿಯರ್ ಗಳಿಗೆ ಲಸಿಕೆ ನೀಡಲಾಗುತ್ತಿದೆ. ಕೊವಿಡ್ ಲಸಿಕೆ ಪಡೆದು ಹದಿನೈದು ನಿಮಿಷ ಆಗಿದೆ, ನಾನು ಆರಾಮವಾಗಿ ಇದ್ದಿನಿ, ವಿಜಯಪುರ ದಲ್ಲಿ ೧೮೦೦ ಪೊಲಿಸ್ ಸಿಬ್ಬಂದಿಗಳ ನೊಂದಾಯಿಸಲಾಗಿದೆ. ಎಲ್ಲರಿಗೂ ಮೆಸೆಜ್ ಬಂದಿವೆ. ಆ ಪ್ರಕಾರ ಸಿಬ್ಬಂದಿ ಲಸಿಕೆ ಪಡೆಯುತ್ತಿದ್ದಾರೆ. ಎಲ್ಲಾ ಸಿಬ್ಬಂದಿ ಪಡೆಯುವಂತೆ ಎಸ್ಪಿ ಅನುಪಮ ಅಗರವಾಲ ಕರೆ ನೀಡಿದರು..