ಬೆಳಗಾವಿ ಕೆ.ಎಸ್.ಆರ್.ಪಿ ಎರಡನೇ ಪಡೆಯ ಸಹಾಯಕ ಕಮಾಂಡೆಂಟ್ ನಾಗೇಶ್ ಯಡಾಲ ಮತ್ತು ಮಹಿಳಾ ಪೊಲೀಸ್ ಇನ್ಸಪೆಕ್ಟರ್ ಜ್ಯೋತಿ ಪಾರಾಂಡೆ ಅವರಿಗೆ ಮುಖ್ಯ ಮಂತ್ರಿಗಳ ಪದಕ ದೊರಕಿದೆ ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗೆ ಹೆಮ್ಮೆ ಮೂಡಿಸಿದೆ ಎಂದು ಕೆ.ಎಸ್.ಆರ್.ಪಿ ಎರಡನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ ತಿಳಿಸಿದ್ದಾರೆ.
ಬೆಳಗಾವಿ ಕೆ.ಎಸ್.ಆರ್.ಪಿ ಎರಡನೇ ಪಡೆಯ ಸಹಾಯಕ ಕಮಾಂಡೆಂಟ್ ನಾಗೇಶ್ ಯಡಾಲ ಮತ್ತು ಮಹಿಳಾ ಪೊಲೀಸ್ ಇನ್ಸಪೆಕ್ಟರ್ ಜ್ಯೋತಿ ಪಾರಾಂಡೆ ಮೀಸಲು ಪಡೆಯಲ್ಲಿ ವಿಶಿಷ್ಟ ಸೇವೆಗಾಗಿ ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳಿಂದ ಪದಕ ಪಡೆದಿದ್ದಾರೆ.
ಇದು ಕೆ.ಎಸ್.ಆರ್.ಪಿ ಎರಡನೇ ಪಡೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಖುಷಿ ನೀಡಿದೆ ಎಂದು ಕೆಎಸ್‍ಆರ್‍ಪಿ ಕಮಾಂಡೆಂಟ್ ಹಂಜಾ ಹುಸೇನ ಹರ್ಷ ವ್ಯಕ್ತಪಡಿಸಿದ್ದಾರೆ.