ಹೊಸದೆಹಲಿಯಲ್ಲಿ ಕೆಂಪುಕೋಟೆ ಮೇಲೆ ಗಣರಾಜ್ಯೋತ್ಸವದ ದಿನ ಸಿಖ್ ಧ್ವಜ ಹಾರಿಸಿದ ಪ್ರಮುಖ ಆರೋಪಿ ದೀಪ್ ಸಿಧು ಎಂಬುವವರನ್ನು ದೆಹಲಿ ಪೊಲೀಸ್ ರ ವಿಶೇಷ ತಂಡವು ಮಂಗಳವಾರ ಬಂಧಿಸಿದೆ.
ಕೇಂದ್ರ ಸರಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಟ್ರ್ಯಾಕ್ಟರ್ ಜಾಥಾ ಹಿಂಸಾಚಾರಕ್ಕೆ ತಿರುಗಿತ್ತು. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಒಂದು ಗುಂಪು ಓಡಾಡಿತ್ತು. ಮತ್ತೊಂದು ಗುಂಪು ಕೆಂಪುಕೋಟೆಗೆ ನುಗ್ಗಿ, ತ್ರಿವರ್ಣ ಧ್ವಜ ಎದುರಿನಲ್ಲಿ ಸಿಖ್ ಧ್ವಜ ಹಾರಿಸಿತ್ತು.
ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗμÉ್ಟೀ ದೆಹಲಿ ಪೊಲೀಸ್ ರು 12 ಮಂದಿ ಪ್ರಮುಖ ಆರೋಪಿಗಳ ಭಾವಚಿತ್ರವನ್ನು ಬಿಡುಗಡೆಗೊಳಿಸಿದ್ದರು. ದೀಪ್ ಸಿಧು ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಪ್ರಮುಖ ಆರೋಪಿಗಳಾದ ಜಜ್ಬೀರ್ ಸಿಂಗ್, ಬುಟಾ ಸಿಂಗ್, ಸುಖ್ ದೇವ್ ಸಿಂಗ್, ಇಕ್ಬಾಲ್ ಸಿಂಗ್ ಬಗ್ಗೆ ಮಾಹಿತಿ ನೀಡಿದರೆ 50,000 ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.ನವದೆಹಲಿಯ ಮೂರು ಗಡಿಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಈಗಾಗಲೇ 77 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ.