Agriculture

ಕೃಷಿ ಕಾಯ್ದೆ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್‍ಗೆ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಸವಾಲು

Share

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಅಮಿತ್ ಶಾ, ನರೇಂದ್ರ ಮೋದಿ ಸೇರಿ ಬಿಜೆಪಿಯವರು ಪ್ರತಿದಿನವೂ ಒಂದೊಂದು ಹೇಳಿಕೆ ಕೊಡ್ತಾರೆ. ಆದ್ರೆ ನಾವು ಹಾಗಲ್ಲ. ಕೃಷಿ ಕಾಯ್ದೆ ವಾಪಸ್ ಪಡೆಯಬೇಕು ಅದೊಂದೆ ನಮ್ಮ ಮಾತು ಎಂದು ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ದೇಶಾಧ್ಯಂತ ಹೆದ್ದಾರಿ ಬಂದ್‍ಗೆ ರೈತ ಮುಖಂಡರು ಕರೆ ನೀಡಿದ ಹಿನ್ನೆಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಸ್ತೆ ಮಧ್ಯದಲ್ಲಿಯೇ ಎತ್ತಿನ ಚಕ್ಕಡಿ ನಿಲ್ಲಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಲಾಯಿತು.

ಕೃಷಿ ಕಾಯ್ದೆ ಬಗ್ಗೆ ಕ್ರಿಕೆಟಿಗ ಸಚಿನ ತೆಂಡೂಲ್ಕರ್ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಬಾಬಾಗೌಡ ಪಾಟೀಲ್ ಸಚಿನ್ ತೆಂಡೂಲ್ಕರ್ ಸೇರಿ ಪದ್ಮಭೂಷಣ ಪ್ರಶಸ್ತಿ ಪಡೆದವರು ರೈತರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ನಾನೇ ನಮ್ಮ ಸ್ವಂತ ಜಮೀನು ಕೊಡುತ್ತೇನೆ. ಜೊತೆಗೆ ಎಮ್ಮೆ, ಎತ್ತುಗಳನ್ನೂ ಕೊಡಿಸುತ್ತೇನೆ. ಅವ್ರು ಐದು ವರ್ಷಗಳ ಕಾಲ ಒಕ್ಕಲುತನ ಮಾಡಬೇಕು. ಆಮೇಲೆ ಬೇಕಾದ್ರೆ ಕೃಷಿ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲಿ ಎಂದು ಸವಾಲು ಹಾಕಿದರು.

ರೈತರು ಬಡವರಾಗಿ ಬಾಳುತ್ತೇವೆ. ಆದ್ರೆ, ಗುಲಾಮರಾಗಿ ಬಾಳೋದಿಲ್ಲ. ರಾಜಕಾರಣಿಗಳ ಹಾಗೇ ರೈತರು ನಾಚಿಕೆಗೆಟ್ಟ ಜನರಲ್ಲ. ಇವರ ಹಾಗೇ ಲಜ್ಜಿಗೆಟ್ಟು ನಿಂತಿಲ್ಲ. ವಿದೇಶದವ್ರು ಮಾತನಾಡಿದ್ರು.ಅವರೇಕೆ ಮಾತನಾಡಿದ್ರು..? ಅವರೇನು ನಮಗೆ ಫಂಡ್ ಕೊಡ್ತಾರಾ..ಅವರ ಹೆಸರೇ ನಮ್ಗೆ ತಿಳಿದಿಲ್ಲ.ಆದ್ರೆ ಭಾರತ ದೇಶದ ಅಭಿವೃದ್ಧಿ ಸಹಿಸಲಾರದೆ ವಿದೇಶಿಗರು ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆದ್ರೆ ದೇಶದಲ್ಲಿ ಯಾರ ಅಭಿವೃದ್ಧಿ ಆಗಿದೆ…?ಅಂಬಾನಿ ಅವ್ರದ್ದು ಲಾಕ್ಡೌನ್ ಅವಧಿಯಲ್ಲಿ ಅಂದ್ರೆ 827 ದಿನದಲ್ಲಿ 3 ಲಕ್ಷ ಕೋಟಿ ಏರಿಕೆ ಆಗಿದೆ. ಇದು ನಿಜವಾದ ಅಭಿವೃದ್ಧಿ. ದೇಶದಲ್ಲಿ ಅಪೌಷ್ಟಿಕತೆಯಿಂದ ಎಷ್ಟು ಜನರು ಸಾವನ್ನಪ್ಪುತ್ತಿದ್ದಾರೆ ಎಂಬುವುದನ್ನು ನಾವು ಪ್ರಶ್ನಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾಗಿದ್ದರು. ಒಟ್ಟಾರೆ ರೈತರ ಬಗ್ಗೆ ಏನೂ ಗೊತ್ತಿಲ್ಲದೇ ಹೇಳಿಕೆ ನೀಡುವುದು ಸರಿಯಲ್ಲ. ಐದು ವರ್ಷ ಕೃಷಿ ಮಾಡಿ, ಆಮೇಲೆ ಹೇಳಿಕೆ ನೀಡಲಿ ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್‍ರು ಸವಾಕು ಹಾಕಿದ್ದು ಕಂಡು ಬಂತು.ರೈತರೊಂದಿಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಗ್ರಾಮೀಣಾಭಿವೃದ್ಧಿ ಮಂತ್ರಿ ಇದ್ದಾಗ ಕೃಷಿ ಕಾಯ್ದೆ ಬಗ್ಗೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಖುದ್ದಾಗಿ ನೋಡಿದ್ದೇನೆ.ಅರ್ಥ ಮಾಡಿಕೊಂಡಿದ್ದೇನೆ. ಅದರ ಅನುಭವ ಇದೆ.ಸಾಕಷ್ಟು ಹಳ್ಳಿಗಳಿಗೆ ತೆರಳಿ ಪರಿಶೀಲನೆಯನ್ನೂ ಮಾಡಿದ್ದೇನೆ.ಈ ಕಾಯ್ದೆಗಳಿಂದ ರೈತರು ಗುಲಾಮರಾಗುತ್ತೇವೆ ಎಂದು ಆರೋಪಿಸಿದರು.

 

Tags:

error: Content is protected !!