Raibag

ಕುಡಚಿ ಪಟ್ಟಣದಲ್ಲಿ 112 ತುರ್ತು ಸಹಾಯವಾಣಿ ಬಗ್ಗೆ ಪೊಲೀಸರಿಂದ ಜನಜಾಗೃತಿ

Share

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವ್ಯಾಪ್ತಿಯಲ್ಲಿ ಪೊಲೀಸ ಇಲಾಖೆ ಹಾಗೂ ಅಜೀತ ಬಾನೆ ಶಾಲೆ ಶಿಕ್ಷಕರು ವಿದ್ಯಾರ್ಥಿಗಳ ಸಹಯೋಗದೊಂದಿಗೆ 112 ತುರ್ತು ಸಹಾಯವಾಣಿ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಕುಡಚಿ ಪಟ್ಟಣದ ಅಜೀತ ಬಾನೆ ಶಾಲೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಗೃತಿ ಜಾಥಾದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಹೆಲ್ಮೇಟ್ ಧರಿಸಿ ವಾಹನ ಚಲಾಯಿಸುತ್ತಿದ್ದವರಿಗೆ ವಿದ್ಯಾರ್ಥಿಗಳಿಂದ ಗುಲಾಬಿ ಹೂವು ನೀಡುವುದರ ಮೂಲಕ ಉತ್ತೇಜನ ನೀಡಿದ್ರೆ, ಇದೇ ವೇಳೆ ಹೆಲ್ಮೇಟ್ ಧರಿಸದವರಿಗೂ ಗುಲಾಬಿ ಹೂ ನೀಡಿ ಹೆಲ್ಮೇಟ್ ಧರಿಸುವಂತೆ ವಿದ್ಯಾರ್ಥಿಗಳು, ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು.

ಕುಡಚಿ ಪಿಎಸ್‍ಐ ಶಿವರಾಜ್ ಧರಿಗೊಂಡ ಮಾತನಾಡಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡಬೇಕು ಹಾಗೂ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಯಾಕೆಂದರೆ ಜೀವ ಅಮೂಲ್ಯವಾದ್ದರಿಂದ ರಸ್ತೆ ನಿಯಮಗಳನ್ನು ಪಾಲಿಸುವುದರೊಂದಿಗೆ, ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಬಾರದು, ಕಡ್ಡಾಯವಾಗಿ ಹೆಲ್ಮೆಟ್ ಬಳಸ ಬೇಕು, ಸರಿಯಾದ ಸಮಯದಲ್ಲಿ ವಾಹನದ ವಿಮೆ ಮಾಡಿಸಬೇಕು, ಕಡ್ಡಾಯವಾಗಿ ಪರವಾನಗಿ ಪಡೆದಿರಬೇಕು ಪೊಲೀಸ ಇಲಾಖೆಯಿಂದ 112 ತುರ್ತು ಸೇವೆ ವಾಹನ ನಿಮ್ಮ ಅನುಕೂಲಕ್ಕೆ ಸರ್ಕಾರ ಯೋಜನೆ ತಂದಿದ್ದು ತಾವು 112 ಸಂಖ್ಯೆಗೆ ಕರೆ ಮಾಡಿದಲ್ಲಿ ಯಾವುದೇ ತುರ್ತುಪರಿಸ್ಥಿತಿಯಲ್ಲಿ ನಮ್ಮ ಸಿಬ್ಬಂದಿ ಇರುವ ವಾಹನ ನಿಮ್ಮ ಸೇವೆಗೆ ಸಿದ್ಧವಾಗಿರುತ್ತದೆ ಎಂದು ಹೇಳಿದರು.

: ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಗೋಂದಳಿ, ಪ್ರಕಾಶ್ ಖವಟಕೂಪ, ಡಂಗೆ, ಮುಕ್ಕೇರಿ ಇತರರು ಹಾಗೂ ಶಾಲಾ ಶಿಕ್ಷಕರಾದ ಮಲ್ಲಿಕಾರ್ಜುನ ಫುಲಾರೆ, ರವೀಂದ್ರ ಭಾವಿ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!