ಕಾರ ಸ್ಪೀಡಾಗಿ ಚಲಾಯಿಸುತ್ತಲೆ ಡ್ರೈವರ್ ಸೀಟ್ ಅದಲು ಬದಲು ಮಾಡಿ ಹುಚ್ಚು ಸಾಹಸ ನಡೆಸಿರುವ ವಿಡಿಯೋ ಒಂದು ವೈರಲ್ ಆಗಿದೆ. ವಿಜಯಪುರದ ಯುವಕರು ಮಾಡಿದ್ದರೆನ್ನಲಾದ ಹುಚ್ಚಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕಾರಲ್ಲಿ ಪ್ರವಾಸ ಹೊರಟ ವೇಳೆ ಯುವಕರ ಹುಚ್ಚು ಸಾಹಸ ನಡೆಸಿದ್ದು ಕಾರು ವೇಗವಾಗಿ ಹೊರಟಿದ್ದ ವೇಳೆ ಯುವಕರಿಂದ ಈ ರೀತಿ ಹುಚ್ಚಾಟ ನಡೆಸಿದ್ದಾರೆ.ಬಸ್ವಲ್ಪ ಹೆಚ್ಚು ಕಡಿಮೆಯಾಗಿದ್ರು ಯುವಕ ಪ್ರಾಣಕ್ಕೆ ಅಪಾಯ ಎದುರಾಗುತ್ತಲಿತ್ತು. ಫೇಸ್ಬುಕ್ ನಲ್ಲಿ ಅಮನ್ ರಾಠೋಡ ಅನ್ನೋ ಯುವಕ ಈ ವಿಡಿಯೋ ಅಪ್ಲೋಡ್ ಮಾಡಿದ್ದಾನೆ.
ವಿಜಯಪುರ ನಗರದ ವಿನಯ ಹುಲಸಗುಂದ ಹಾಗೂ ಮನೋಜ್ ಬಿರಾದಾರ್ ಎಂಬವರಿಂದ ಕಾರ್ ಸೀಟ್ ಅದಲು ಬದಲು ಮಾಡಿಕೊಂಡಿದ್ದಾರೆ. ವಿನಯ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ನಾಗಿದ್ದು ವೇಗವಾಗಿ ಕಾರ್ ಚಲಿಸುತ್ತಿರುವಾಗ ಯುವಕ ಹುಚ್ಚು ಸಾಹಸ ನಡೆಸಿದ್ದಾರೆ…