latest

ಕಾನೂನು ಬಾಹಿರ ಕ್ರಶರ್ ರದ್ಧು ಮಾಡಿ..ಆದ್ರೆ ನ್ಯಾಯಬದ್ಧ ಕ್ರಶರ್ ತಡೆಯಬಾರದು..ಸಿಎಂ ಬಿಎಸ್‍ವೈ

Share

ಯಾವ ಕಾರಣಕ್ಕೂ ಸಹ ನ್ಯಾಯಬದ್ಧವಾಗಿ ನಡೆಯುತ್ತಿರುವ ಕ್ರಶರ್‍ಗಳನ್ನು ತಡೆಯಕೂಡದು. ಆದರೆ ಕಾನೂನು ಬಾಹಿರವಾಗಿ ಇರುವ ಕ್ರಶರ್‍ಗಳನ್ನು ರದ್ಧು ಮಾಡಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮಹತ್ವದ ಆದೇಶ ಹೊರಡಿಸಿದ್ದಾರೆ.

ಮಂಗಳವಾರ ಸದನದಲ್ಲಿ ಈ ಸಂಬಂಧ ಮಾತನಾಡಿದ ಮುಖ್ಯಮಂತ್ರಿಗಳು ಇಡೀ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ, ಪಿಡಬ್ಲುಡಿ ಸೇರಿ ಬೇರೆ ಬೇರೆ ಕಾಮಗಾರಿಗಳು ನಡೆಯುತ್ತಿವೆ. ಅಲ್ಲಿ ಜಲ್ಲಿ ಮರಳು, ಅತ್ಯವಶ್ಯವಾಗಿದೆ. ಹೀಗಾಗಿ ಯಾವ ಕಾರಣಕ್ಕೂ ಸಹ ನ್ಯಾಯಬದ್ಧವಾಗಿ ನಡೆಯುತ್ತಿರುವ ಕ್ರಶರ್‍ಗಳನ್ನು ತಡೆಯಕೂಡದು.

ಆದರೆ ಕಾನೂನು ಬಾಹಿರವಾಗಿ ಇರುವ ಕ್ರಶರ್‍ಗಳನ್ನು ರದ್ಧು ಮಾಡಬೇಕು ಎಂದು ನಿನ್ನೆ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ವಿಪಕ್ಷ ನಾಯಕರು ಕೂಡ ಹೇಳಿದ್ದಾರೆ. ಮತ್ತೆ ಅರ್ಜಿ ಹಾಕಿ ನಿಜವಾಗಲೂ ಪ್ರಾಮಾಣಿಕವಾಗಿದ್ದರೆ, ಕಾನೂನು ಪ್ರಕಾರ ಮಾಡಲು ಸಾಧ್ಯವಿದ್ದರೆ ಮಾಡಬೇಕು. ನ್ಯಾಯ ಬದ್ಧವಾಗಿರುವ ಕ್ರಶರ್‍ಗಳು ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾಮಗಾರಿಗಳಿಗೆ ಜಲ್ಲಿ, ಮರಳು ಕೊರತೆ ಆಗಬಾರದು. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ ಎಂದು ಹೇಳಿದರು.

Tags:

error: Content is protected !!