Kagawad

ಕಾಗವಾಡ ತಾಲೂಕಿನ ಐನಾಪೂರದ ಶ್ರೀ ಸಿದ್ಧೇಶ್ವರ ಕೆರೆ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ 18 ಲಕ್ಷ ರೂ. ವೆಚ್ಚದಲ್ಲಿ 289ನೇ ಕೆರೆ ಅಭಿವೃದ್ಧಿ ಕಾಮಗಾರಿಗೆ ಬಸವೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಚಾಲನೆ

Share

ಕಾಗವಾಡ ತಾಲೂಕಿನ ಐನಾಪೂರದ ಶ್ರೀ ಸಿದ್ಧೇಶ್ವರ ಕೆರೆ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ 18 ಲಕ್ಷ ರೂ. ವೆಚ್ಚದಲ್ಲಿ 289ನೇ “ಮಾದರಿ ನಮ್ಮೂರು ನಮ್ಮ ಕೆರೆ” ಅಭಿವೃದ್ಧಿ ಕಾಮಗಾರಿಗೆ ಬಸವೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಇವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಶುಕ್ರವಾರ ರಂದು ಕಾಗವಾಡ ತಾಲೂಕಿನ ಐನಾಪೂರದ ಗ್ರಾಮದೇವತೆ ಶ್ರೀ ಸಿದ್ಧೇಶ್ವರ ಮಂದಿರದ ಹತ್ತಿರದ ಸಿದ್ಧೇಶ್ವರ ಕೆರೆ ಅಭಿವೃದ್ಧಿಗಾಗಿ ಪದ್ಮಭೂಷಣ, ಕರ್ನಾಟಕರತ್ನ ಡಾ. ವೀರೇಂದ್ರಜಿ ಹೆಗ್ಡೆ ಮತ್ತು ಮಾತೋಶ್ರೀ ಹೇಮಾವತಿ ಹೆಗ್ಡೆ ಇವರ ಶುಭ ಆಶೀರ್ವಾದದಿಂದ ಐನಾಪೂರದಲ್ಲಿ ಅನೇಕ ವರ್ಷಗಳಿಂದ ಬರಡಾಗಿ ಉಳಿದಿರುವ ಸಿದ್ಧೇಶ್ವರ ಕೆರೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಬೆಳಿಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘದ ಕಾರ್ಯಕರ್ತರು ಜಲಕುಂಭ ತೆಗೆದುಕೊಂಡು ಸ್ಥಳಕ್ಕೆ ಆಗಮಿಸಿದರು.

ಮಂತ್ರೋಪಚಾರಗಾಳಿಂದ ಸ್ಥಳ ಶುದ್ಧಿಕರಣಗೊಳಿಸಿ ಐನಾಪೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಇವರು ಉದ್ಘಾಟಿಸಿದರು. ಅಧ್ಯಕ್ಷತೆ ಶ್ರೀ ಸಿದ್ಧೇಶ್ವರ ಕೆರೆ ಸಮೀತಿ ಅಧ್ಯಕ್ಷ ಸುಭಾಷ ಪಾಟೀಲ ಇವರು ಅಧ್ಯಕ್ಷತೆ ವಹಿಸಿ ವಿಧಿವತ ಪೂಜೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಚಿಕ್ಕೋಡಿ ವಿಭಾಗದ ನಿರ್ದೇಶಕ ಕೃಷ್ಣಾ ಟಿ., ಐನಾಪೂರ ಪಟ್ಟಣ ಪಂಚಾಯತಿ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಕೆರೆ ಸಮೀತಿ ಉಪಾಧ್ಯಕ್ಷ ರಾಜುಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಚಂದ್ರಶೇಖರ ಗಾಣಿಗೇರ, ಭಿಮ್ಮಪ್ಪ ಭೀರಡಿ, ಸಂಜೀವ ಭಿರಡಿ, ಬಾಹುಬಲಿ ಕುಸನಾಳೆ, ಸುಭಾಷ ಪಾಟೀಲ, ರವೀಂದ್ರ ಗಾಣಿಗೇರ ಉಪಸ್ಥಿತರಿದ್ದರು.

ಚಿಕ್ಕೋಡಿ ವಿಭಾಗದ ನಿರ್ದೇಶಕ ಕೃಷ್ಣಾ ಟಿ. ಇವರು ಮಾತನಾಡುವಾಗ, ಐನಾಪೂರದ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ದೊಡ್ಡ ಸಾವಿರ ವರ್ಷದ ಇತಿಹಾಸವಿದೆ. ಮಂದಿರ ಹತ್ತಿರದ ಕೆರೆ ಈ ವರೆಗೆ ಅಭಿವೃದ್ಧಿಗೊಳ್ಳದೆಯಿದೆ. ಇದನ್ನು ಅಭಿವೃದ್ಧಿಗೊಳಿಸಲು ಧರ್ಮಸ್ಥಳದ ಪೂಜ್ಯರ ಗಮನಕ್ಕೆ ತಂದಾಗ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿಯ ಐನಾಪೂರಕ್ಕೆ ಹೆಚ್ಚಿನ 18 ಲಕ್ಷ ರೂ. ವೆಚ್ಚುಮಾಡಿ ಅಭಿವೃದ್ಧಿಗೊಳಿಸಲು ಆಯ್ಕೆಮಾಡಲಾಗಿದೆ. ಇಲ್ಲಿಗೆ “ಮಾದರಿ ನಮ್ಮೂರು ನಮ್ಮ ಕೆರೆ”, “ಕೆರೆ ಸಂಜೀವಿನಿ” ಈ ಯೋಜನೆಯಡಿಯಲ್ಲಿ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದೇವೆ. ಈ ವರೆಗೆ 255 ಕೆರೆಗಳು ಅಭಿವೃದ್ಧಿಗೊಳಿಸಿದ್ದೇವೆ. ಈ ವರ್ಷ 289ನೇ ಕೆರೆ ಇದಾಗಿದೆ. ಇದನ್ನು ಪೂರ್ಣಗೊಳಿಸಲು ಕೆರೆ ಅಭಿವೃದ್ಧಿ ಸಮೀತಿ, ಪಟ್ಟಣದ ಪಟ್ಟಣ ಪಂಚಾಯತಿ ಸದಸ್ಯರು ಸಹಕರಿಸಲಿಯೆಂದು ಮನವಿ ಮಾಡಿಕೊಂಡರು.

 

ಸಿದ್ಧೇಶ್ವರ ಕೆರೆ ಸಮೀತಿ ಉಪಾಧ್ಯಕ್ಷ ರಾಜುಗೌಡ ಪಾಟೀಲ ಮಾತನಾಡುವಾಗ, ಐನಾಪೂರ ಕೆರೆಗೆ ಸಾವಿರಾರು ವರ್ಷದ ಇತಿಹಾಸವಿದೆ. ಕೆರೆ ಸಿದ್ಧೇಶ್ವರವೆಂದು ಹೆಸರ ಪಡೆದಿದ್ದು, ಕೆರೆ 7 ಎಕರ ಕ್ಷೇತ್ರವಾಗಿದ್ದು, ಈ ಕೆರೆ ಅಭಿವೃದ್ಧಿಗಾಗಿ ಧರ್ಮಸ್ಥಳದಿಂದ 18 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು, ಕೆರೆಗೆ ತಡೆಗೊಡೆ ನಿರ್ಮಿಸುವುದು, ಹೂಳು ಎತ್ತುವುದು, ನೀರು ತುಂಬಿ ಬೋಟಿಂಗ ಮಾಡುವುದು, ಜಿಲ್ಲೆಗೊಂದು ಮಾದರಿ ಕೆರೆ ಧರ್ಮಸ್ಥಳದವರು ಮಾಡುತ್ತಿದ್ದು, ಐನಾಪೂರ ಕೆರೆ ಆಯ್ಕೆಮಾಡಿದ್ದಾರೆ ಎಂದರು.

 

ಹಶೀಲ್ದಾರ ಪ್ರಮೀಳಾ ದೇಶಪಾಂಡೆ ಮಾತನಾಡುವಾಗ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಡೀ ರಾಜ್ಯಾದ್ಯಂತ ಬೇರೆ-ಬೇರೆ ವಿಭಾಗದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ಐನಾಪೂರ ಕೆರೆಗಾಗಿ 18 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ಇನ್ನೂ ಬೇಕಾದ ಅನುದಾನಕ್ಕಾಗಿ ಸಚಿವ ಶ್ರೀಮಂತ ಪಾಟೀಲರಿಂದ ಅನುದಾನ ಮಂಜೂರುಗೊಳಿಸಲು ನಾನು ವಿನಂತಿಸುತ್ತೇನೆಯೆಂದರು.

 

ಐನಾಪೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿಗಳು ಆಶೀರ್ವದಿಸಿದರು. ಪಟ್ಟಣ ಪಂಚಾಯತಿ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಸದಸ್ಯ ರವೀಂದ್ರ ಗಾಣಿಗೇರ ಮಾತನಾಡಿ, ಅಭಿವೃದ್ಧಿ ಕಾಮಗಾರಿಗೆ ಒಂದಾಗಿ ಸಹಕರಿಸೋಣ ಎಂದರು.

ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಸ್.ಬಿ.ಸಂಜೀವಕುಮಾರ, ಕೃಷಿ ಮೇಲ್ವಿಚಾರಕರು ನಿರೂಪಿಸಿದರು. ಅಥಣಿ ತಾಲೂಕಾ ಯೋಜನಾಧಿಕಾರಿ ರಾಜು ನಾಯಿಕ ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ರಾಮದಾಸಗೌಡ, ಅಂಜನಾ ಬಿರಣಗಿ, ಅಶ್ವೀನಿ ಮಾನೆ, ಅಮಗೊಂಡಾ ವಡೆಯರ, ಸುರೇಶ ಅಡಿಶೇರಿ, ಅಣ್ಣಾಸಾಬ ಡೂಗನವರ, ಭಿಮ್ಮಣ್ಣ ಭಿರಡಿ, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:

error: Content is protected !!