Kagawad

ಕಾಗವಾಡ ತಾಲೂಕಿನಲ್ಲಿ ಭರದಿಂದ ಸಾಗುತ್ತಿದೆ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಭೋವಿ

Share

ಕಾಗವಾಡ ತಾಲೂಕಿನ ಐನಾಪೂರ, ಉಗಾರ, ಶೇಡಬಾಳ, ಮಂಗಸೂಳಿ, ಶಿರಗುಪ್ಪಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶ್ರೀರಾಮ ಜನ್ಮಭೂಮಿ ತಿರ್ಥಕ್ಷೇತ್ರದಲ್ಲಿ ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಭಕ್ತರಿಂದ ವಂತಿಗೆ ಸಂಗ್ರಹಣೆ ಮಾಡಲಾಗುತ್ತಿದೆ. ಮಂಗಳವಾರ ರಂದು ಉಗಾರ ಖುರ್ದ, ಉಗಾರ ಬುದ್ರುಕ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಣೆ ಮಾಡಲಾಯಿತು.

ಉಗಾರ ಬುದ್ರುಕ ಗ್ರಾಮ ಪಂಚಾಯತಿಯ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಇವರು ಶ್ರೀರಾಮ ರಥಕ್ಕೆ ಸ್ವಾಗತ ಸಲ್ಲಿಸಿ ಮಾತನಾಡುವಾಗ, ಭಗವಾನ್ ಶ್ರೀರಾಮ ಪ್ರತಿಯೊಬ್ಬರ ಹೃದಯದಲ್ಲಿದ್ದಾರೆ. ಭವ್ಯ ಮಂದಿರ ನಿರ್ಮಾಣಕ್ಕಾಗಿ ನೂರಾರು ವರ್ಷಗಳಿಂದ ಕಾಯುತ್ತಿದ್ದರು. ಈಗ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಪ್ರತಿಯೊಬ್ಬರಿಂದ 10 ರೂ. ಕಾಣಿಕೆ ತೆಗೆದುಕೊಳ್ಳುತ್ತಿದ್ದು, ಉಗಾರದ ಎಲ್ಲ ಚುನಾಯತಿ ಗ್ರಾಪಂ ಸದಸ್ಯರಿಂದ, ಜನರಿಂದ ದೇಣಿಗೆ ಸಂಗ್ರಹಿಸಿ ನೀಡುತ್ತಿದ್ದು ಇದೊಂದು ಪವೀತ್ರ ಕರ್ತವ್ಯ. 10 ರೂ.ದಿಂದ 1 ಸಾವಿರ ರೂ. ವರೆಗೆ ಕಾಣಿಕೆ ನೀಡುತ್ತಿದ್ದೇವೆ ಎಂದರು.

ವಿಶ್ವ ಹಿಂದೂ ಪರಿಷತ್ತಿನ ಕಾಗವಾಡ ತಾಲೂಕಾ ಅಧ್ಯಕ್ಷರಾದ ರಮೇಶ ಭೋವಿ ಮಾತನಾಡಿ, ಭಗವಾನ್ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಕಾಗವಾಡ ತಾಲೂಕಿನ ಹಳ್ಳಿ-ಹಳ್ಳಿಗಳಲ್ಲಿ ರಥವನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ಇದಕ್ಕೆ ಎಲ್ಲ ಜನರಿಂದ ಮತ್ತು ಶ್ರೀರಾಮ ಭಕ್ತರು ಕೈತುಂಬ ಕಾಣಿಕೆ ನೀಡುತ್ತಿದ್ದಾರೆ. ಈ ವರೆಗೆ ಸುಮಾರು 5 ಲಕ್ಷ ರೂ. ಕಾಣಿಕೆ ನೀಡಿದ್ದು, ನೂರಾರು ವರ್ಷದ ಶ್ರೀರಾಮ ಮಂದಿರ ಕಟ್ಟಿಸುವ ಕನಸ್ಸು ನನಸಾಗುತ್ತಿದೆ. ಉಗಾರ ಬುದ್ರುಕ ಗ್ರಾಮದಲ್ಲಿ ರಥಕ್ಕೆ ಭವ್ಯ ಸ್ವಾಗತವಾಗಿದೆಯೆಂದರು.

ಈ ವೇಳೆ ಸಾಗರ ಪೂಜಾರಿ, ವಿನಾಯಕ ಶಿಂಧೆ, ವಿಶ್ವ ಹಿಂದೂ ಪರಿಷತ್ತಿನ ಸಂಚಾಲಕ ಯೊಗೇಶ ಕುಂಬಾರ, ಪದ್ಮಣ್ಣ ಚೌಗುಲೆ, ಜಯಪಾಲ ಸಾಂಗವಡೆ, ಅಮೀನ ಶೇಖ, ಅಪ್ಪಾಸಾಹೇಬ ಸನದಿ, ದಾದಾ ಚೌಧರಿ, ಉದಯ ಕಾಂಬಳೆ, ಶ್ರಾವಣ ಗೊಂಧಳಿ, ಸೇರಿದಂತೆ ಅನೇಕರು ಇದ್ದರು.

Tags:

error: Content is protected !!