ಕಾಗವಾಡ ತಾಲೂಕಿನ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸಿಐಟಿಯು ತಾಲೂಕಾ ಘಟಕದಿಂದ ಕಾಗವಾಡ ತಹಶೀಲ್ದಾರರಿಗೆ ಐಸಿಡಿಎಸ್ ಯೋಜನೆಗೆ ಅನುದಾನ ಕಡಿತ ಮಾಡಿರುವ ಕುರಿತು ಪ್ರತಿಭಟಿಸಿ ಮನವಿ ಅರ್ಪಿಸಿದರು.
ಬುಧವಾರ ರಂದು ಕಾಗವಾಡ ತಹಶೀಲ್ದಾರ ಕಚೇರಿ ಎದುರು ಸಿಐಟಿಯು ನೌಕರ ಸಂಘದ ಕಾರ್ಯಕರ್ತೆಯರಾದ ಸವಿತಾ ಹಿರೇಮಠ ಇವರು ಮನವಿ ಅರ್ಪಿಸುತ್ತಿರುವಾಗ, ಕೇಂದ್ರ ಸರಕಾರ ಕೈಗೊಂಡ ನಿರ್ಣಯಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಅನೇಕ ತೊಂದರೆಗಳು ಆಗುತ್ತಿವೆ.
ಕೇಂದ್ರ ಸರಕಾರದ ಐಸಿಡಿಎಸ್ ಮತ್ತು ಬಿಸಿ ಊಟ ಯೋಜನೆಗಳು ಮೂಲತಃ ಕೇಂದ್ರ ಸರ್ಕಾರದ ಯೋಜನೆಗಳು. ಈ ಯೋಜನೆಗಳನ್ನು ಖಾಯಂ ಮಾಡುವ ಬದಲಿಗೆ ನಿರಂತರವಾಗಿ ಬಜೆಟ್ನ ಅನುದಾನಗಳನ್ನು ಕಡಿತ ಮಾಡುವ ಮುಖಾಂತರ ಈ ಯೋಜನೆಗಳನ್ನು ಹಂತಹಂತವಾಗಿ ಬಲಹೀನಗೋಳಿಸಲಾಗುತ್ತದೆ ಎಂದು ಆರೋಪಿಸಿದರು.
ಕಾರ್ಯಕರ್ತೆಯರಾದ ಸವಿತಾ ಹಿರೇಮಠ, ಸಾವಿತ್ರಿ ಕಾಂಬಳೆ, ವಂದನಾ ಕಾಂಬಳೆ, ಅರ್ಚನಾ ಢಾಲೆ, ಶಾಂತಾ ವಡ್ಡರ, ತಾರಾಬಾಯಿ ಪಾಟೀಲ, ಶಶೀಕಲಾ ಧಳವಾಯಿ, ಆಕಾಶಣಿ ಗುಂಜಾಳೆ ಸೇರಿದಂತೆ ಅನೇಕ ಕಾರ್ಯಕರ್ತೆಯರು ಪ್ರತಿಭಟಣೆಯಲ್ಲಿ ಪಾಲ್ಗೊಂಡಿದ್ದರು.
ಉಪತಹಸೀಲ್ದಾರ ಎ.ಎಚ್.ತಗಾರೆ ಇವರು ಮನವಿ ಸ್ವೀಕರಿಸಿದರು. ಈ ವೇಳೆ ಗ್ರೇಡ್-2 ತಹಶೀಲ್ದಾರ ಅಣ್ಣಾಸಾಹೇಬ ಕೋರೆ, ಬಸವರಾಜ ಬೋರಗಲ್ಲ, ಸೇರಿದಂತೆ ಅನೇಕರು ಇದ್ದರು.