Chikkodi

ಕರಾಟೆ ಶಿಕ್ಷಕರಿಗೆ ತರಬೇತಿ ಶಿಬಿರ…

Share

ಬೆಳಗಾವಿ ಜಿಲ್ಲಾ ಕರಾಟೆ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕರಾಟೆ ಶಿಕ್ಷಕರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಮುಂಬೈನ ಏಶಿಯನ್ ಸಿತೋರಿ ಸ್ಪೋರ್ಟ್ಸ್ ಹಾಗೂ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಸಂಜಯ ಗವಾಳಿಯವರು ಕರಾಟೆ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು. ಕರಾಟೆಯ ವಿವಿಧ ಭಂಗಿಗಳನ್ನು ಹಾಗೂ ಕರಾಟೆಯ ಹೊಸ ಹೊಸ ಪದ್ದತಿಗಳನ್ನು ತಿಳಿಸಿದರು.

ಈ ತರಬೇತಿ ಶಿಬಿರದಲ್ಲಿ ಬೆಳಗಾವಿ ಜಿಲ್ಲಾ ಕರಾಟೆ ಅಸೋಸಿಯೇಷನ್ 10 ಜನ ಕರಾಟೆ ಶಿಕ್ಷಕರಿಗೆ ತರಬೇತುದಾರರಾದ ಸಂಜಯ ಗವಾಳಿ ಅವರು ಬ್ಯಾಚ್ ಹಾಗೂ ಟೈಗಳನ್ನು ವಿತರಿಸಿದರು.ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಜಯ ಗವಾಳಿಗವರು ದೇಶದ ವಿವಿಧ ರಾಜ್ಯಗಳಲ್ಲಿ ಕರಾಟೆ ತರಬೇತುದಾರರಿಗೆ ತರಬೇತಿಯನ್ನು ನೀಡುತ್ತಾ ಬರುತ್ತಿದೆವೆ…ಫೆಬ್ರುವರಿ ಇಂದ ಕರಾಟೆಯ ಕ್ಲಾಸಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕರಾಟೆ ಶಿಕ್ಷಕರಿಗೆ ತರಬೇತಿಯನ್ನು ನೀಡುತ್ತಿದೆವೆ ಎಂದು ಸಂಜಯ ಗವಾಳಿಯವರು ತಿಳಿಸಿದರು.

ನಂತರ ಜಿಲ್ಲಾ ಕರಾಟೆಯ ಅಸೋಸಿಯೇಷನ್ ಬೆಳಗಾವಿ ಇದರ ಅಧ್ಯಕ್ಷರಾದ ರಾಜು ಪಾಟೀಲ ಯವರು ಮಾತನಾಡಿ ಕಳೆದ ಒಂದು ವರ್ಷದಿಂದ ಕೋರೋನಾ ಹಿನ್ನೆಲೆಯಲ್ಲಿ ಕರಾಟೆ ಕ್ಲಾಸಗಳನ್ನು ಸ್ಥಗಿತಗೊಳಿಸಲಾಗಿತು.ಈಗ ಮತ್ತೆ ಕರಾಟೆ ಕ್ಲಾಸಗಳನ್ನು ಪ್ರಾರಂಭಿಸುವ ಉದ್ದೇಶದಿಂದ ಕರಾಟೆ ಶಿಕ್ಷಕರಿಗೆ ತರಬೇತಿಯನ್ನು ಹಮ್ಮಿಕೊಂಡಿದೆವೆ ಎಂದು ರಾಜು ಪಾಟೀಲಯವರು ತಿಳಿಸಿದರು.

ಈ ಸಂಧರ್ಭದಲ್ಲಿ ಕರಾಟೆ ಶಿಕ್ಷಕರಾದ ಮಂಜುನಾಥ ಬೂವಿ,ಕಿರಣ ಬಜಂತ್ರಿ,ಅನೀಲ ಬಜ್ರಂತಿ,ಶಂಕರ ರಾಯಮಾನೆ,ಆಕಾಶ ತೋದಲಬಾಗಿ,ಕುಮಾರ್ ಬಜಂತ್ರಿ,ರೋಹಿತ ಮಾಳಿ,ಸ್ನೇಹಲತಾ ಚವಾನ ಉಪಸ್ಥಿತರಿದ್ದರು.

Tags:

error: Content is protected !!