ಉತ್ತರಖಾಂಡ್‍ನಲ್ಲಿ ಸಂಭವಿಸಿದ ಹಿಮಪಾತ ಅತ್ಯಂತ ದುರದೃಷ್ಟಕರ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರಖಾಂಡ ಸಹಜ ಸ್ಥಿತಿಗೆ ಶೀಘ್ರವಾಗಿ ಮರಳಬೇಕೆಂದು ನಾನು ಪ್ರಾರ್ಥಿಸುತ್ತೇನೆ ಮತ್ತು ಈ ದುರಂತದ ಸಮಯದಲ್ಲಿ ಉತ್ತರಾಖಂಡದ ಜನರು ಧೈರ್ಯಶಾಲಿಯಾಗಿರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.