ನಾವು ಹೋರಾಟಕ್ಕೂ ಸೈ..ಸ್ವಚ್ಛತಾ ಅಭಿಯಾನಕ್ಕೂ ಸೈ ಎಂಬುದನ್ನು ಬೆಳಗಾವಿಯ ರೈತ ಹೋರಾಟಗಾರರು ಸಾಬೀತು ಪಡಿಸಿದ್ದಾರೆ. ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹೌದು ಹೋರಾಟಗಾರರು ಎಂದರೆ ಕೇವಲ, ಭಾಷಣ, ಕೂಗಾಟ, ಚೀರಾಟ, ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗುವುದಕ್ಕೆ ಮಾತ್ರ ಸಿಮೀತ ಎಂದು ನಾವು ನೀವೆಲ್ಲಾ ತಿಳಿದುಕೊಂಡಿದ್ದೇವು. ಆದ್ರೆ ಬೆಳಗಾವಿಯ ರೈತ ಮುಖಂಡರು ನಾವು ಹೋರಾಟಕ್ಕೂ ಸಿದ್ಧರಿದ್ದೇವೆ. ಅದರ ಜೊತೆಗೆ ನಗರವನ್ನು ಸ್ವಚ್ಛಗೊಳಿಸಲು ನಾವು ಬದ್ಧರಿದ್ದೇವೆ ಎಂಬುದನ್ನು ತೋರಿಸಿದ್ದಾರೆ. ರವಿವಾರ ರೈತ ಮುಖಂಡರಾದ ಪ್ರಕಾಶ್ ನಾಯಿಕ್, ಕಿರಣ ಅವರ ನೇತೃತ್ವದಲ್ಲಿ ರೈಲ್ವೇ ಓವರ್ ಬ್ರೀಡ್ಜ್ ಮೇಲೆ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ಈ ವೇಳೆ ಮಾತನಾಡಿದ ಪ್ರಕಾಶ್ ನಾಯಿಕ್ ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ಕಿಡಿಕಾರಿದರು. ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ರೈತರು ಸಿದ್ಧರಾಗಿದ್ದಾರೆ.
ಇಡೀ ದೇಶದ ರೈತರು ಆಕ್ರೋಶಭರಿತರಾಗಿದ್ದು, ಇದು ಪ್ರಜಾಪ್ರಭುತ್ವದ ದೇಶವಾಗಿದ್ದು, ಗೂಂಡಾಗಿರಿ ದೇಶ ನಮ್ಮದಲ್ಲ, ಯಾರಿಗೋ ಒಂದಿಷ್ಟು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ನಾವು ಬಿಡುವುದಿಲ್ಲ ಎಂದು ಹರಿಹಾಯ್ದರು.
ಒಟ್ಟಾರೆ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಮುಖಂಡರು ಕಿಡಿಕಾರಿದ್ದು ಈ ವೇಳೆ ಕಂಡು ಬಂತು.