Belagavi

ಆರ್‌ಸಿಯೂನಲ್ಲಿ ವಿವಿಧ ಕಾಲೇಜುಗಳ ಪ್ರಾಚಾರ್ಯರಿಗೆ ಒಂದು ದಿನದ ಕಾರ್ಯಾಗಾರ

Share

ಉತ್ತರ ಕರ್ನಾಟಕದ ಉನ್ನತ ಶಿಕ್ಷಣವು ಗುಣಮಟ್ಟದಿಂದ ಕೂಡಿರಬೇಕು. ಪ್ರತಿಯೊಂದು ಕಾಲೇಜು ರಾಷ್ಟ್ರೀಯ ಮನ್ನಣೆಯ ಅಗ್ರ ಶ್ರೇಯಾಂಕಗಳನ್ನು ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ನ್ಯಾಕ್ ಮನ್ನಣೆಯನ್ನು ಪಡೆದುಕೊಳ್ಳದ ಕಾಲೇಜುಗಳು ಇಂದಿನಿAದಲೇ ತ್ವರಿತಗತಿಯಿಂದ ಆ ಪ್ರಕ್ರಿಯೆಗೆ ಒಳಗಾಗಬೇಕು. ಭವಿಷ್ಯದಲ್ಲಿ ಶ್ರೇಯಾಂಕಗಳನ್ನು ಪಡೆದುಕೊಳ್ಳದೇ ಇರುವ ಕಾಲೇಜುಗಳು ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಬೆಂಗಳೂರಿನ ನ್ಯಾಕ್ ಸಲಹೆಗಾರರಾದ ಡಾ.ಎಂ.ಎಸ್. ಶ್ಯಾಮಸುಂದರ್ ಅವರು ಅಭಿಪ್ರಾಯಪಟ್ಟರು.

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶವು ನ್ಯಾಕ್ ಸಂಯೋಜನೆಗೊಳಗಾಗದ ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರುಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಹೊಸ ರಾಷ್ಟಿçÃಯ ಶಿಕ್ಷಣ ನೀತಿಯು ಜಾರಿಗೆ ಬರುವುದಕ್ಕೂ ಮುನ್ನ ಕಾಲೇಜುಗಳು ನ್ಯಾಕ್ ಮನ್ನಣೆಯನ್ನು ಹೊಂದಿದ್ದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವುದರ ಜೊತೆಗೆ ಈ ಭಾಗದ ಉನ್ನತ ಶಿಕ್ಷಣಕ್ಕೆ ಮಹತ್ವವನ್ನು ತಂದುಕೊಟ್ಟAತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ. ರಾಮಚಂದ್ರಗೌಡ ಅವರು ಈ ಭಾಗದ ಶಿಕ್ಷಣ ಪ್ರೇಮಿಗಳು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ನಿರೀಕ್ಷಿಸುತ್ತಿದ್ದಾರೆ. ಪ್ರಾಚಾರ್ಯರುಗಳು ಹೊಸ ಶಿಕ್ಷಣ ನೀತಿ ಜಾರಿಯಾಗುವುದಕ್ಕೂ ಮುನ್ನ ನ್ಯಾಕ್ ಪ್ರಕ್ರಿಯೆಗೆ ತಮ್ಮ ಕಾಲೇಜುಗಳನ್ನು ಒಳಪಡಿಸಬೇಕೆಂದು ಕರೆಕೊಟ್ಟರು. ಇದೇ ಸಂದರ್ಭದಲ್ಲಿ ದಿನವಿಡೀ ಮೂರು ಗೋಷ್ಠಿಗಳಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿಯವರು, ಕುಲಸವರು ಮೌಲ್ಯಮಾಪನ ಪ್ರೊ. ಎಸ್. ಎಂ. ಹುರಕಡ್ಲಿ ಹಾಗೂ ಹಣಕಾಸು ಅಧಿಕಾರಿಗಳಾದ ಪ್ರೊ. ಡಿ. ಎನ್. ಪಾಟೀಲ ಉಪಸ್ಥಿತರಿದ್ದರು.

ಕಾರ್ಯಾಗಾರವನ್ನು ಐ.ಕ್ಯೂ.ಎ.ಸಿ. ನಿರ್ದೇಶಕರಾದ ಪ್ರೊ. ಶಿವಾನಂದ ಗೊರನಾಳೆ ನಡೆಸಿಕೊಟ್ಟರು. ಶ್ರೀಮತಿ ಗೌರಮ್ಮ ಪಾಟೀಲ ನಿರೂಪಿಸಿದರು. ಕಾರ್ಯಾಗಾರದಲ್ಲಿ ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರುಗಳು ಹಾಗೂ ಐ.ಕ್ಯೂ.ಎ.ಸಿ. ಸಂಯೋಜಕರು ಹಾಜರಿದ್ದರು.

Tags:

error: Content is protected !!