Belagavi

ಆತ್ಮನಿರ್ಭರ ಭಾರತದತ್ತ ರಿಯಾ ಇನ್ಫೋಟೆಕ್ ಹೆಜ್ಜೆ: ನಿರ್ದೇಶಕಿ ಲೀನಾ ಟೋಪಣ್ಣವರ ಹರ್ಷ

Share

ಬೆಳಗಾವಿ

 

ಬೆಳಗಾವಿಯಲ್ಲಿ ಸಮಾಜ ಸೇವಕಿ ಹಾಗೂ ಬಾಲಭವನ ನಿರ್ದೇಶಕಿ ಲೀನಾ ಟೋಪಣ್ಣವರ ನೇತೃತ್ವದ ರಿಯಾ ಇನ್ಫೋಟೆಕ್ ವತಿಯಿಂದ ಆತ್ಮನಿರ್ಭರ ಭಾರತ ಯೋಜನೆಯಡಿ ಮಹಿಳೆಯರು, ಮಕ್ಕಳಿಗಾಗಿ ನಾಲ್ಕು ತಿಂಗಳಿಂದ ವಿವಿಧ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಸಮಾಜ ಸೇವಕಿ ಹಾಗೂ ಬಾಲಭವನ ನಿರ್ದೇಶಕಿ ಲೀನಾ ಟೋಪಣ್ಣವರ ಮಾರ್ಗದರ್ಶನದಲ್ಲಿ ನಡೆದ ಈ ತರಬೇತಿ ಕಾರ್ಯಕ್ರಮಗಳು ಸ್ವಾವಲಂಬಿ ಜೀವನಕ್ಕೆ ಪ್ರೇರಣೆ ನೀಡುವಲ್ಲಿ ಯಶಸ್ವಿಯಾಗಿ ಗಮನ ಸೆಳೆದಿವೆ.

ಬೆಳಗಾವಿ ರಿಯಾ ಇನ್ಫೋಟೆಕ್ ಈಗ ಮತ್ತಷ್ಟು ಕ್ರಿಯಾಶೀಲವಾಗಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕರೆಗೆ ಓಗೊಟ್ಟಿರುವ ರಿಯಾ ಇನ್ಫೋಟೆಕ್ ಮುಖ್ಯಸ್ಥೆ ಹಾಗೂ ಬಾಲಭವನ ನಿರ್ದೇಶಕಿ ಲೀನಾ ಟೋಪಣ್ಣವರ ಮಾರ್ಗದರ್ಶನದಲ್ಲಿ ರಿಯಾ ಇನ್ಫೋಟೆಕ್ ಚಟುವಟಿಕೆಗಳು ಇನ್ನಷ್ಟು ಗರಿಗೆದರಿವೆ. ರಿಯಾ ಇನ್ಫೋಟೆಕ್ ಈಗ ಆರ್ಥಿಕವಾಗಿ ಅಶಕ್ತರು, ಮಹಿಳೆಯರು, ಮಕ್ಕಳಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸ್ವಾವಲಂಬಿ ಜೀವನಕ್ಕೆ ಪ್ರೇರಣೆ ನೀಡಿರುವುದು ಗಮನ ಸೆಳೆಯುವಂತಿದೆ.

ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ, ಸಿದ್ಧ ಉಡುಪು ತಯಾರಿಕೆ, ಬೇಕರಿ ತಿಂಡಿ, ತಿನಿಸು ತಯಾರಿಕೆ ತರಬೇತಿಯೂ ಸೇರಿ ಹಲವು ಕಾರ್ಯಕ್ರಮಗಳನ್ನು ರಿಯಾ ಇನ್ಫೋಟೆಕ್ ನಡೆಸಿದೆ. ತರಬೇತಿ ಪಡೆದ ಮಹಿಳೆಯರು, ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದ ಮೂಲಕ ತರಬೇತಿ ಹೊಂದಿದವರ ಅನುಭವಗಳನ್ನು ಕೇಳುವ, ತಿಳಿಯುವ ಅವಕಾಶವನ್ನೂ ಮಾಡಿಕೊಡಲಾಗಿದೆ. ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಡುವ ಅಂತಹ ಕೆಲವು ಕಾರ್ಯಕ್ರಮಗಳ ಝಲಕ್ ಇಗೋ ಇಲ್ಲಿದೆ.

ಈ ವೇಳೆ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಕ್ರಮಗಳ ಮೂಲಕ ಆತ್ಮನಿರ್ಭರ ಭಾರತಕ್ಕೆ ಕೈ ಜೋಡಿಸಿರುವ ರಿಯಾ ಇನ್ಫೋಟೆಕ್ ಮಾಲಿಕರೂ ಆಗಿರುವ ಬಾಲಭವನದ ನಿರ್ದೇಶಕಿ ಲೀನಾ ಟೋಪಣ್ಣವರ ಮಾತನಾಡಿ, ರಿಯಾ ಇನ್ಫೋಟೆಕ್‍ನಿಂದ ಸಮಾಜಕ್ಕೆ ಉಪಯುಕ್ತವೆನಿಸುವ ಕೆಲವು ತರಬೇತಿ ನಡೆಸಬೇಕೆಂದು ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಯಿತು. ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ, ಕೇಕ್ ತಯಾರಿಕೆ, ಷೇರು ಮಾರುಕಟ್ಟೆ ಮಾಹಿತಿ ಹೀಗೆ ಹಲವು ತರಬೇತಿಗಳ ಮೂಲಕ ಸಮಾಜವನ್ನು ಸ್ವಾವಲಂಬಿಯಾಗಿಸುವ ಪ್ರಯತ್ನ ನಡೆಸಲಾಗಿದೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧಾ ಮನೋಭಾವ ಬೆಳೆಸುವ ಮೂಲಕ ಕಲಿಯುವ ಮನಸ್ಥಿತಿಯನ್ನು ನಿರ್ಮಿಸಲಾಗಿದೆ. ಇದು ಸಮಾಜಕ್ಕೆ ಉಪಯೋಗವಾಗುವಂತಾದರೆ ರಿಯಾ ಇನ್ಫೋಟೆಕ್ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ಒಟ್ಟಿನಲ್ಲಿ ರಿಯಾ ಇನ್ಫೋಟೆಕ್ ಈಗ ಇನ್ನಷ್ಟು ಕ್ರಿಯಾಶೀಲವಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಅಶಕ್ತರು, ಮಹಿಳೆಯರು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ, ಸ್ವಾವಲಂಬಿ ಬದುಕು ಕಟ್ಟಿಕೊಡಲು ಮುಂದಾಗಿರುವುದು ಗಮನ ಸೆಳೆಯುವಂತಿದೆ.

Tags:

error: Content is protected !!