ಅಪ್ರಾಪ್ತ ಬಾಲಕಿಯೊಂದಿಗೆ ಸಲುಗೆ ಬೆಳೆಸಿ ಮದುವೆಯಾಗುತ್ತೇನೆ ನಂಬಿಸಿ ಅತ್ಯಾಚಾರ ಎಸಗಿದ ಕಿತ್ತೂರು ತಾಲೂಕು ಕಾದರವಳ್ಳಿ ಗ್ರಾಮದ ಕಾಮುಕ ಪೋಕ್ಸೊ ಕಾಯ್ದೆಯಡಿ ಅಪರಾಧ ಕೃತ್ಯ ಎಸಗಿರುವುದನ್ನು ಸಾಬೀತುಪಡಿಸಿರುವ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ಕಾದಿರಿಸಿ ಆದೇಶ ಹೊರಡಿಸಿದೆ.
ಕಿತ್ತೂರು ತಾಲೂಕು ಕಾದರವಳ್ಳಿ ಗ್ರಾಮದ ಅಡವಯ್ಯ ಶಂಕರಯ್ಯ ಪೂಜೇರ 2017 ಡಿಸೆಂಬರ್ 25ರಿಂದ ಎಸಗಿರುವ ಕೃತ್ಯ ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಅಪ್ರಾಪ್ತ ಬಾಲಕಿಯೊಂದಿಗೆ ಸಲುಗೆ ಬೆಳೆಸಿ ಮದುವೆಯಾಗುತ್ತೇನೆ ನಂಬಿಸಿ ಅತ್ಯಾಚಾರ ಎಸಗಿದ್ದು, ಬಾಲಕಿ 8 ತಿಂಗಳು ಗರ್ಭೀಣಿಯಾಗಿರುವುದು ಬಹಿರಂಗವಾಗಿತ್ತು. ಆ ನಂತರ ಈತ ಬಾಲಕಿಯನ್ನು ಮದುವೆಯಾಗಲು ನಿರಾಕರಿಸಿದ್ದ. ಈತನಿಗೆ ಈ ಮೊದಲು ಮದುವೆಯಾಗಿರುವುದು ಗೊತ್ತಾಗಿತ್ತು.
ಈ ಕುರಿತು ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ರಾಘವೇಂದ್ರ ಹವಾಲ್ದಾರ್ ತನಿಖೆ ಕೈಗೊಂಡಿದ್ದರು. 3ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿದರು. ಶಿಕ್ಷೆ ಕಾಯ್ದಿರಿಸಿ ಆದೇಶ ಪ್ರಕಟಿಸಿದರು.
ಸರಕಾರಿ ಅಭಿಯೋಜಕ ಎಲ್.ವಿ.ಪಾಟೀಲ ಸರಕಾರದ ಪರವಾಗಿ ವಾದ ಮಂಡಿಸಿದ್ದರು.