Belagavi

ಅಜಂ ನಗರ ಎಸ್‍ಬಿಐ ಎಟಿಎಂ ಮೂರು ತಿಂಗಳಿಂದ ಬಂದ್: ಗ್ರಾಹಕರ ಅಸಮಾಧಾನ

Share

ಬೆಳಗಾವಿ ಅಜಮ್ ನಗರದಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಎಟಿಎಂ ಬಂದ್ ಆಗಿ ಮೂರು ತಿಂಗಳಾಗಿದೆ. ಆದರೆ ಎಸ್‍ಬಿಐ ಅಧಿಕಾರಿಗಳು ಎಟಿಎಂ ತೆರೆಯುವ ಗೋಜಿಗೆ ಹೋಗಿಲ್ಲ. ನಿತ್ಯ ಸಾವಿರಾರು ಗ್ರಾಹಕರಿಗೆ ಉಪಯುಕ್ತವಾಗಿದ್ದ ಎಟಿಎಂ ಬಂದ್ ಆಗಿದ್ದರೂ ನಿರ್ಲಕ್ಷ್ಯ ವಹಿಸಿದ ಎಸ್‍ಬಿಐ ಅಧಿಕಾರಿಗಳ ನಡೆ ನಿಗೂಢವಾಗಿದ್ದು, ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ ಅಜಮ್ ನಗರದಲ್ಲಿ ಇದ್ದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಎಟಿಎಂನಿಂದ ಅಜಂ ನಗರ, ಶಾಹುನಗರ, ಬಾಕ್ಸೈಟ್ ರಸ್ತೆ, ಎಪಿಎಂಸಿ ಮಾರುಕಟ್ಟೆ, ಶಾಹುನಗರ, ಬಿ.ಕೆ.ಕಂಗ್ರಾಳಿ, ಕೆ.ಎಚ್.ಕಂಗ್ರಾಳಿ ಸೇರಿ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗಿತ್ತು. ಆದರೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಈ ಎಟಿಎಂ ಬಂದ್ ಆಗಿ ಮೂರು ತಿಂಗಳಾದರೂ ಪುನಾರಂಭವಾಗಿಲ್ಲ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.

ಎಟಿಎಂ ಬಂದ್ ಆದರೂ ಏಕೆ ತೆರೆದಿಲ್ಲ ಎಂಬುದು ನಿಗೂಢವಾಗಿದ್ದು, ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Tags:

error: Content is protected !!