Belagavi

ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳ ಸಭೆ

Share

ಅಖಿಲ ಭಾರತ ವೀರಶೈವ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕದ ತಾಲ್ಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು.

ಶಿವಬಸವನಗರದ ಲಿಂಗಾಯತ ಭವನದಲ್ಲಿ ಬೆಳಗಾವಿ ಜಿಲ್ಲೆಯ ಅಖಿಲ ಭಾರv ವೀರಶೈವ ಮಹಾಸಭಾ ತಾಲ್ಲೂಕಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸರ್ವತೋಮುಖ ಅಭಿವೃಧ್ಧಿಗಾಗಿ ಮುಂಬರುವ ದಿನಗಳಲ್ಲಿ ಈ ಕಾರ್ಯ ಚಟಿವಟಿಕೆಗಳ ಕುರಿತು ಸಮಾಲೋಚನೆ ನಡೆದು ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಡಾ ಗುರುದೇವಿ ಹುಲೆಪ್ಪನವರಮಠ ಅವರು ಇಂದಿನ ಯುವಜನತೆ ಮತ್ತು ಮಕ್ಕಳು ನಾಳೆಯ ನಾಡಿನ ಆಸ್ತಿಯಾದ್ದರಿಂದ ಅವರ ಸರ್ವತೋಮುಖ ವ್ಯಕ್ತಿತ್ವದ ನಿರ್ಮಿತಿಗೆ ಹಿರಿಯರು ಶರಣರ ತತ್ವ ವಿಚಾರಗಳನ್ನು ಅವರಿಗೆ ಪರಿಚಯಿಸುವ ಅವಶ್ಯಕತೆಯಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಆಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ಶರಣೆ ರತ್ನಪ್ರಭಾ ಬೆಲ್ಲದ ಅವರು ಜಿಲ್ಲಾ ಘಟಕದ ಸಾಧನೆಗಳನ್ನು ಪ್ರಸ್ತಾಪಿಸಿ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಿಲ್ಲ. ಸಮುದಾಯದ ಶ್ರೇಯೋಭಿವೃಧ್ಧಿಗೆ ಸಂಘಟಿತರಾಗಿ ಶ್ರಮಿಸೋಣ ಎಂದರು.

ಸಭೆಯಲ್ಲಿ ಡಾ.ಬಾಳಿ, ನ್ಯಾಯವಾದಿ ಝೀರಲಿ, ಚಂದ್ರಶೇಖರ ಬೆಂಬಳಗಿ ಮಹಿಳಾ ಘಟಕದ ಅಧ್ಯಕ್ಷ ಜ್ಯೋತಿ ಭಾವಿಕಟ್ಟಿ, ಆರ್.ಪಿ ಪಾಟೀಲ ಡಾ.ಜಯಶ್ರೀ ನಾಗರಳ್ಳಿ, ಹೇಮಲತಾ ಇಂಡಿ ಶ್ರೀ ವೀರಣ್ಣ ಖಾನಾಪೂರೆ, ಶ್ರೀ ಚಿದಾನಂದ ಧೀಮಶೆಟ್ಟಿ, ಶ್ರೀ ಕೋರಬು,ಆಶಾ ಯಮಕನಮರಡಿ, ಪ್ರತಿಭಾ ಕಳ್ಳಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!