ಕೆಲವು ಸಂಘಟನೆಗಳು, ಹಿತಾಸಕ್ತಿಗಳು ಡಾ.ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ದಲಿತರು ಸಂಘಟಿತರಾಗಿ ಇಂಥವರಿಗೆ ಉತ್ತರ ನೀಡಬೇಕಾಗಿದೆ ಎಂದು ಡಿಎಸ್‍ಎಸ್ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ ಹೇಳಿದರು.

ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ವಿಭಾಗೀಯ ಮಟ್ಟದ ದಲಿತ ಸಂಘರ್ಷ ಸಮಿತಿ ಸಭೆ ಆಯೋಜಿಸಲಾಗಿತ್ತು.ಸಭೆಯಲ್ಲಿ ಜಿಲ್ಲಾಧ್ಯಕ್ಷ ಗೌತಮ ಪಾಟೀಲ, ಸಿದ್ದಪ್ಪ ಕಾಂಬಳೆ, ಕೆಂಪಣ್ಣ ಕಾಂಬಳೆ, ಶಶಿಕಾಂತ ಸಾಳ್ವೆ, ಮೂರ್ತಿ ಬಿಲಾರೆ, ಜೀತೇಂದ್ರ ಕಾಂಬಳೆ, ನಾರಾಯಣ ಬಡಗಾವಿ, ಬಲರಾಜ ಅರವಾರ್, ನಾಗರಾಜ ತಳವಾರ್ ಮತ್ತು ಲಕ್ಷ್ಮಣ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ನ್ಯಾಯವಾದಿ ಆನಂದ ಸದ್ರೆಮನಿ, ಬಸವರಾಜ ರಾಯಗೋಳ, ಅಶೋಕ ಮನ್ನಿಕೇರಿ, ಕಲ್ಲಪ್ಪ ರಾಮಚನ್ನವರ, ಮಹಾದೇವ ರಾಮಚನ್ನವರ, ಮಹಾಂತೇಶ ಕೋಲ್ಕಾರ ಮತ್ತಿತರರನ್ನು ಸನ್ಮಾನಿಸಲಾಯಿತು.
ಈ ವೇಳೆ ಡಿಎಸ್‍ಎಸ್ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ ಮಾತನಾಡಿ, ದೇಶದಲ್ಲಿ ಷಡ್ಯಂತ್ರ ಮಾಡಿ ದಲಿತರು, ಹಿಂದುಳಿದವರು, ಪರಿಶಿಷ್ಟರಿಗೆ ತೊಂದರೆ ನೀಡಲಾಗುತ್ತಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೂ ಧಕ್ಕೆ ಮಾಡಲಾಗುತ್ತಿದೆ. ಈ ಎಲ್ಲ ಷಡ್ಯಂತ್ರಗಳ ಹಿಂದೆ ಆರ್‍ಎಸ್‍ಎಸ್ ಕೈವಾಡವಿದೆ. ಅದಕ್ಕಾಗಿ ದಲಿತರೆಲ್ಲ ಈಗ ಒಗ್ಗಟ್ಟಾಗಬೇಕಿದೆ. ಮೀಸಲಾತಿಯನ್ನು ಉಳಿಸಿಕೊಳ್ಳಲು, ಸಂವಿಧಾನಬದ್ಧ ಹಕ್ಕು ಪಡೆದುಕೊಳ್ಳಲು ಹೋರಾಟ ಮಾಡಬೇಕಿದೆ ಎಂದರು.
ಈ ವೇಳೆ ದಲಿತ ಸಂಘರ್ಷ ಸಮಿತಿಯ ವಿವಿಧ ಜಿಲ್ಲೆಗಳ ಮುಖಂಡರು, ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.