ಸಾಂದರ್ಭಿಕ ಚಿತ್ರ
ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರು ಬಂದಿದ್ದಾರೆ. ಈ ವೇಳೆ ಎಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತೇವೆ ಎಂಬ ಭಯಕ್ಕೆ ನದಿಗೆ ಹಾರಿದ ಇಬ್ಬರು ಯುವಕರು ಕಣ್ಮರೆಯಾಗಿರುವ ಘಟನೆ ಜಿಲ್ಲೆ ರಾಮದುರ್ಗ ಹೊರ ವಲಯದ ಮಲಪ್ರಭಾ ನದಿಯಲ್ಲಿ ಸಂಭವಿಸಿದೆ.
ಹೌದು ರಾಮದುರ್ಗ ಪಟ್ಟಣ ಸಮೀಪದ ಹೊರ ವಲಯದ ಮಲಪ್ರಭಾ ನದಿ ದಂಡೆಯ ಮೇಲೆ ಕೆಲವೊಂದಿಷ್ಟು ಯುವಕರು ಅಂದರ್ ಬಾಹರ್ ಆಡುತ್ತಿದ್ದರು. ಈ ವೇಳೆ ಪೊಲೀಸರು ಒಮ್ಮೆಲೆ ಅಟ್ಯಾಕ್ ಮಾಡಿದ್ದಾರೆ. ಪೊಲೀಸರು ಬಂದ ಸುದ್ದಿ ತಿಳಿಯುತ್ತಿದ್ದಂತೆ ಇಸ್ಪೀಟ್ ಆಡುತ್ತಿದ್ದ ಆರು ಜನರು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಬಿಟ್ಟಿದ್ದಾರೆ. ಇದರಲ್ಲಿ ನಾಲ್ವರು ಯುವಕರು ನದಿಯಲ್ಲಿ ಈಜಿ ಹರಸಾಹಸ ಪಟ್ಟು ದಡ ಸೇರಿದ್ದಾರೆ. ಆದರೆ ಇಬ್ಬರು ಯುವಕರು ಮಾತ್ರ ಕಣ್ಮರೆ ಆಗಿದ್ದಾರೆ. ಮಂಜು ಬಂಡಿವಡ್ಡರ(30) ಹಾಗೂ ಸಮೀರ ಬಟಕುರ್ತಿ(22) ಎಂದು ಗುರುತಿಸಲಾಗಿದೆ. ಸಧ್ಯ ನದಿಯಲ್ಲಿ ಕಣ್ಮರೆಯಾಗಿರುವ ಇಬ್ಬರು ಯುವಕರಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈವರೆಗೆ ಇಬ್ಬರ ಸುಳಿವು ಸಿಗದೇ ಇರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.