ಕೋವಿಡ್‍ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮಕ್ಕಳಿಗೆ ಶಿಕ್ಷಣ ನೀಡಲು ಆನಲೈನ್ ಮೂಲಕ ಶಿಕ್ಷಕರು ಮತ್ತು ಪಾಲಕರ ಶ್ರಮ ಅಭಿನಂದನಾರ್ಹ ಎಂದು ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾಣದ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ ಹೇಳಿದರು.
ಅವರು ನಗರದ ಅಂಗಡಿ ಇಂಟರ್‍ನ್ಯಾಷನಲ್ ಸ್ಕೂಲಿನಲ್ಲಿ ಗುರುವಾರ ನಡೆದ ಆರನೇ ಪೂರ್ವಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಆನ್‍ಲೈನ್ ಮೂಲಕ ಮಾತನಾಡಿದರು.
ಮುಖ್ಯ ಅತಿಥಿ ಸುರೇಶ ಅಂಗಡಿ ಸಂಸ್ಥೆಯ ಚೇರಮನ್ ಮಂಗಲ ಅಂಗಡಿ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಕೂಲಿನ ಮುಖ್ಯಾಧ್ಯಾಪಕಿ ಆಶಾ ರಜಪೂತ ಪೂರ್ವ ಪ್ರಾಥಮಿಕ ವರದಿಯನ್ನು ಓದಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಕ್ಕಳು ಅವ್ಯವಸ್ಥೆಯ ಕುರಿತು ತಮ್ಮದೇ ಆದ ಜ್ಞಾನ ಮತ್ತು ಅನುಭವವನ್ನು ಆನ್‍ಲೈನ್ ಮೂಲಕ ಹಾಡು, ನೃತ್ಯ, ನಾಟಕ ಹಾಗೂ ಭಾಷಣದಲ್ಲಿ ಬಹಳ ಸುಂದರವಾಗಿ ಸಾದರಪಡಿಸಿದರು.
ಯು.ಕೆ.ಜಿ. ವಿದ್ಯಾರ್ಥಿಗಳಾದ ಶ್ಲೋಕ ಶಾಬುಜಿ ಮತ್ತು ಸುರೇಶ ಕರಿಗಾರ್ ಪದವಿ ಭಾಷಣವನ್ನು ಮಾಡಿದರು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ಮಕ್ಕಳಿಗೆ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗೆ ಕರೆಸಿ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮವನ್ನು ಕು. ಶ್ರದ್ಧಾ ಸೂರ್ಯವಂಶಿ ಮತ್ತು ಕು. ಓಮ್‍ಜಾಧವ ನೆರವೇರಿಕೊಟ್ಟರು.
ಆಡಳಿತಾಧಿಕಾರಿ ರಾಜು ಜೋಶಿ, ಶಿಕ್ಷಕಿಯರಾದ ಮಂಗಳಾ ಕಾಳೆ, ಸಂಧ್ಯಾ ಶಾನಬಾಗ, ಅಶ್ವಿನಿ ಅಂಗದಕರ, ದೈಹಿಕ ಶಿಕ್ಷಕ ಮಹಾದೇವ ಶಿರಗಾಂವಕರ, ಗಿರೀಶಕುಲಕರ್ಣಿ ಸೇರಿದಂತೆ ಸ್ಕೂಲಿನ ಎಲ್ಲ ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮಂಜುಳಾ ಪಿಳ್ಳೆ ಪರಿಚಯಿಸಿದರು. ಡಯಾನಾಡಿಕೊಸ್ಟಾ ನಿರೂಪಿಸಿದರು. ಲಕ್ಷ್ಮಿ ಸಾಂಗ್ಲಿ ವಂದಿಸಿದರು.