ಚಿಕ್ಕೋಡಿ ತಾಲೂಕಿನ ಅಂಕಲಿಯ ಡಾ! ಎನ್ ಎ ಮಗದುಮ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಉಚಿತ ಕ್ಯಾನ್ಸರ್ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಈ ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರವನ್ನು ಡಾ! ಎನ್ ಮಗದುಮಯವರು ಉದ್ಘಾಟಿಸಿದರು.ನಂತರ ಮಾತನಾಡಿ ಡಾ! ಮಗದುಮ ಅವರು ಇವತ್ತಿನ ಪ್ರಚಲಿತ ದೀನಗಳಲ್ಲಿ ಬಹಳಷ್ಟು ಜನರು ಕ್ಯಾನ್ಸರದಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮನಷ್ಯನ ಬದಲಾದ ಜೀವನ ಶೈಲಿ ಹಾಗೂ ಬದಲಾದ ಆಹಾರ ಪಧ್ಧತಿಗಳಿಂದ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ.
ಈ ಕಾರಣಕ್ಕಾಗಿಯೇ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಕ್ಯಾನ್ಸರ್ ರೋಗಿಗಳಿಗೆ ಆಯುರ್ವೇದ ಪದ್ದತಿಗಳ ಮೂಲಕ ಕ್ಯಾನ್ಸರ್ ರೋಗವನ್ನು ಗುಣಪಡಿಸುವುದು ಈ ಶಿಬಿರದ ಉದ್ದೇಶವಾಗಿದೆ ಎಂದು ಡಾ! ಎನ್ ಎ ಮಗದುಮಯವರು ತಿಳಿಸಿದರು…
ನಂತರ ಡಾ! ವಿಶಾಲಾಕ್ಷಿಯವರು ಮಾತನಾಡಿ ಕ್ಯಾನ್ಸರ್ ರೋಗಿಗಳಿಗೆ ಆಯುರ್ವೇದ ಪದ್ದತಿಗಳಲ್ಲಿ ಒಳ್ಳೆಯ ಚಿಕಿತ್ಸೆಗಳು ಲಭ್ಯವಿದೆ..ಕ್ಯಾನ್ಸರ್ ರೋಗಿಗಳಿಗೆ ರೋಗಪ್ರತಿನಿರೋಧಕ ಶಕ್ತಿಯನ್ನು ಹೇಚ್ಚಿಸಲು ಆಯುರ್ವೇದ ಹಲವಾರು ಪದ್ದತಿಯ ಓಷಧಿಗಳಿವೆ.
ಕ್ಯಾನ್ಸರದಂತಹ ಮಹಾರೋಗಕ್ಕೆ ಆಯುರ್ವೇದ ಪದ್ದತಿಗಳಲ್ಲಿ ಪಂಚಕರ್ಮ ಸೇರಿದಂತೆ ಹಲವಾರು ಪದ್ದತಿಗಳು ಲಭ್ಯವಿದ್ದು ಈ ಕಾರಣಕ್ಕಾಗಿಯೇ ಕ್ಯಾನ್ಸರ್ ರೋಗಿಗಳು ಆಯುರ್ವೇದ ಪದ್ದತಿಯ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖ ಆಗುವುದು ಸೂಕ್ತ ಎಂದು ಡಾ! ವಿಶಾಲಾಕ್ಷಿಸಿಯವರು ಅಭಿಪ್ರಾಯ ಪಟ್ಟರು.
ಈ ಸಂಧರ್ಭದಲ್ಲಿ ಡಾ! ಬಿ ವೈ ಗಂಟಿ,ಡಾ! ಕೀರಣ ಮುತನಾಳಿ,ಡಾ! ಪೂಜಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು….