ಮಹಾಮಾನವತಾವಾದಿ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಅವಮಾನ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ.
ಗುಡಸ ಗ್ರಾಮದಲ್ಲಿ ಹುಕ್ಕೇರಿ ಗೋಕಾಕ ಮುಖ್ಯ ರಸ್ತೆಯ ಬದಿಗೆ ಮಹಾನಾಯಕ ಧಾರಾವಾಹಿ ಬ್ಯಾನರ ಅಳವಡಿಸಲಾಗಿತ್ತು. ಕಿಡಿಗೇಡಿಗಳು ಹರಿದುಹಾಕಿದ್ದಾರೆ ಎಂದು ಗ್ರಾಮದ ದಲಿತ ಮುಖಂಡರು ಆರೋಪಿಸಿದ್ದಾರೆ.ಸಂವಿಧಾನ ಶಿಲ್ಪಿಗೆ ಅವಮಾನ ವೆಸಗಿದ ಕಿಡಿಗೆಡಿಗಳನ್ನು ಕೂಡಲೆ ಪತ್ತೆ ಹಚ್ಚಿ ಬಂದಿಸಿ ಕಠಿಣ ಕ್ರಮ ಜರುಗಿಸಬೇಕು ವಿಳಂಬವಾದಲ್ಲಿ ಬರುವ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೆವೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ಬಿದಿಗಿಳಿದ ದಲಿತ ಸಂಘಟನೆಗಳು ಮತ್ತು ಅಂಬೇಡ್ಕರ ಅಭಿಮಾನಿಗಳು ಸಂಕೇಶ್ವರ ಗೋಕಾಕ ರಾಜ್ಯ ಹೆದ್ದಾರಿ ಬಂದ ಮಾಡಿ ಪ್ರತಿಭಟನೆ ಮಾಡಿದರು.
ಸ್ಥಳಕ್ಕೆ ಹುಕ್ಕೇರಿ ಪೋಲಿಸ್ ಠಾಣೆಯ ಪಿ ಎಸ್ ಐ ಉನ್ನದ ಮತ್ತು ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಪರಿಸ್ಥಿತಿ ತಿಳಿಗೊಳಿಸಿ ಗ್ರಾಮಸ್ಥರ ಮನವಿ ಸ್ವೀಕರಿಸಿ ತಪ್ಪಿತಸ್ಥರನ್ನು ಬಂದಿಸಿ ಕ್ರಮ ಜರುಗಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗುಡಸ ಗ್ರಾಮದ ದಲಿತ ಮುಖಂಡರು, ದಲಿತ ಸಂಘಟನಾಕಾರರು ಉಪಸ್ಥಿತರಿದ್ದರು.