Vijaypura

ವಿಶ್ವದಲ್ಲೇ ಅತ್ಯಂತ ಹೆಚ್ಚು ಪ್ರಾಥಮಿಕ ಸದಸ್ಯತ್ವ ಹೊಂದಿರುವ ಪಕ್ಷ ಬಿಜೆಪಿ-ಎಸ್.ಟಿ.ಮೋರ್ಚಾ ರಾಜ್ಯಾದ್ಯಕ್ಷ ತಿಪ್ಪರಾಜು ಹವಾಲ್ದಾರ್…

Share

18 ಕೋಟಿಗಿಂತ ಹೆಚ್ಚು ಪ್ರಾಥಮಿಕ ಸದಸ್ಯತ್ವ ಹೊಂದಿರುವ ಪಕ್ಷ ಅದು ಬಿಜೆಪಿ ಪಕ್ಷ ಎಂದು ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯದ್ಯಕ್ಷ ತಿಪ್ಪರಾಜು ಹವಾಲ್ದಾರ್ ಹೇಳಿದ್ದಾರೆ.

ವಿಜಯಪುರದಲ್ಲಿ ಇಂದು ಮಾದ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ವಿಶ್ವದಲ್ಲೇ ಹೆಚ್ಚು ಪ್ರಾಥಮಿಕ ಸದಸ್ಯತ್ವ ಹೊಂದಿರುವ ಪಕ್ಷ ಅದು ಬಿಜೆಪಿ ಎಂದರು. ಇನ್ನು ರಾಜ್ಯದ್ಯಕ್ಷರಾದ ನಳಿನಕುಮಾರ ಕಟೀಲ್ ಅವರು ಗ್ರಾಮ ಪಂಚಾಯತಿ ಚುನಾವಣಾ ಸಂದರ್ಭದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದ ಸಲುವಾಗಿ 6 ತಂಡಗಳನ್ನು ಮಾಡುವ ಮೂಲಕ ಎಲ್ಲೆಡೆ ಪ್ರಚಾರ ಕಾರ್ಯವನ್ನು ನಡೆಸಿದ್ದರು.

ಇದರ ಪ್ರಯುಕ್ತ ಇಂದು ರಾಜ್ಯದ 5670 ಪಂಚಾಯತಿಗಳ ಪೈಕಿ 86183 ಸದಸ್ಯರು ಚುನಾವಣೆಗೆ ಸ್ಪರ್ದಿಸಿದ್ದರು ಇದರಲ್ಲಿ ಬಿಜೆಪಿ ಬೆಂಬಲಿ 45246 ಅಬ್ಯರ್ಥಿಗಳು ಜಯಶಾಲಿಯಾಗಿದ್ದಾರೆ ಎಂದರು. ಇನ್ನೂ ಜಯಶಾಲಿಯಾದ ಅಬ್ಯರ್ಥಿಗಳಿಗೆ ಅಭಿನಂದನೆ ತಿಳಿಸಲು 5 ತಂಡಗಳನ್ನು ಈಗಾಗಲೇ ಮಾಡಲಾಗಿದ್ದು ಜನಸೇವಕ್ ಸಮಾವೇಶಗಳ ಮೂಲಕ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ತಿಳಿಸುವದರು ಜೊತೆಗೆ ಮುಂಬರುವ ತಾಲುಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣಾ ತಯಾರಿಗೆ ಈಗಿನಿಂದಲೇ ಅಣಿಯಾಗುತ್ತೇವೆ ಎಂದರು…

Tags:

error: Content is protected !!