Mysore

ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನ್ ಮಾಡಿದ್ದಾರೋ ಯಾರಿಗೆ ಗೊತ್ತು?: ಮಾಜಿ ಸಿಎಂ ಸಿದ್ದರಾಮಯ್ಯ

Share

ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನ್ ಮಾಡಿದ್ದಾರೋ ಯಾರಿಗೆ ಗೊತ್ತು.? ಸಿಡಿಯಲ್ಲಿ ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ, ಅದು ಗೊತ್ತಾಗಬೇಕು ಅಂದ್ರೆ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಿಡಿಯಲ್ಲಿ ಏನೇನ್ ಇದೆ ಅನ್ನೋದು ಬಹಿರಂಗವಾಗಬೇಕಾದ್ರೇ ತನಿಖೆಯಾಗಬೇಕು. ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನ್ ಮಾಡಿದ್ದಾರೋ ಯಾರಿಗೆ ಗೊತ್ತು? ಎಂದರು.

ಇನ್ನು ಸಂಪುಟ ಸೇರಿರುವ ಸಿ.ಪಿ.ಯೋಗೀಶ್ವರ ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಹೋಗಲು ಬಹಳ ಕಷ್ಟ ತಗೊಂಡಿದ್ದಾನAತೆ. ೯ ಕೋಟಿ ರೂ. ಖರ್ಚು ಮಾಡಿದ್ದಾನಂತೆ. ಯಾವುದಕ್ಕೆ ಅಷ್ಟು ಹಣ ಖರ್ಚು ಮಾಡ್ದ? ಯಾರಿಗಾಗಿ ಎಷ್ಟೆಷ್ಟು ಮಾಡ್ದ ಅನ್ನೋದು ತಿಳಿಯಬೇಕಲ್ವೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

ಇನ್ನು ಏಪ್ರಿಲ್ ತಿಂಗಳ ಬಳಿಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುತ್ತಾರೆ. ನನಗೆ ಆರ್.ಎಸ್.ಎಸ್. ಮೂಲಗಳಿಂದ ಈ ಬಗ್ಗೆ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದರು. ಯಾವುದೇ ಪಾರ್ಟಿಯ ಹೈಕಮಾಂಡ್ ಆದರೂ ತೆಗೆಯುತ್ತೇನೆಂದು ಬಹಿರಂಗವಾಗಿ ಹೇಳಲ್ಲ. ಹಾಗಾಗಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆಯುತ್ತೇನೆಂದು ಅಮಿತ್ ಶಾ ಹೇಳೋಕಾಗುತ್ತಾ? ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಅಂತಾನೇ ಅಮಿತ್ ಷಾ ಹೇಳಬೇಕು. ಹೈಕಮಾಂಡ್ ತೆಗೆಯುತ್ತೇನೆಂದ್ರೆ ಸರ್ಕಾರ ನಡೆಯುತ್ತಾ? ಕೆಲಸ ಮಾಡೋಕಾಗುತ್ತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅಮಿತ್ ಷಾ ಅವರು ಆ ರೀತಿ ಹೇಳಬಹುದು. ಆದರೆ ನನಗಿರುವ ಮಾಹಿತಿಯೇ ಬೇರೆ. ನನಗೆ ಆರ್‌ಎಸ್‌ಎಸ್ ಮೂಲಗಳಿಂದ ಮಾಹಿತಿ ಇದೆ. ಸಿಎಂ ಯಡಿಯೂರಪ್ಪ ಅವರನ್ನು ಏಪ್ರಿಲ್ ಆದ ಮೇಲೆ ತೆಗೆಯುತ್ತಾರೆ ಎಂದು ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಒಟ್ಟಿನಲ್ಲಿ ಯಡಿಯೂರಪ್ಪನವರ ಬಗ್ಗೆ ಸಿಡಿ ಇದೆ ಎನ್ನುವುದು ಬಹಿರಂಗವಾಗಬೇಕು. ಈ ಬಗ್ಗೆ ತನಿಖೆ ನಡೆಸಬೇಕು. ಯಡಿಯೂರಪ್ಪ ಏಪ್ರಿಲ್ ನಂತರ ಮನೆಗೆ ಹೋಗುವುದು ಖಚಿತ ಎಂದು ಮಾಜಿ ಸಿಎಂ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಚಿತ ಸ್ವರದಲ್ಲಿ ಪುನರುಚ್ಚಿಸಿದರು.

Tags:

error: Content is protected !!