Uncategorized

ಬೆಳಗಾವಿಯ ಹಿರಿಯ ಪತ್ರಕರ್ತ ಮನೋಹರ ಕಾಲಕುಂದ್ರೀಕರಗೆ ಮಹಾರಾಷ್ಟ್ರ ಸಿಎಂ ನಿವಾಸದಲ್ಲಿ ಸನ್ಮಾನ

Share

ಮರಾಠಿ ಪತ್ರಿಕೋದ್ಯಮದಲ್ಲಿ 50 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಬೆಳಗಾವಿ ಮರಾಠಿ ದೈನಿಕ ರಣಝುಂಜಾರ್ ಪತ್ರಿಕೆಯ ಸಂಪಾದಕ ಮನೋಹರ ಕಾಲಕುಂದ್ರೀಕರ ಅವರನ್ನು ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿವಾಸದಲ್ಲಿ ಗುರುವಾರ ಸನ್ಮಾನಿಸಲಾಯಿತು.

ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿವಾಸದ ಸಭಾಗೃಹದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಬೆಳಗಾವಿ ಮರಾಠಿ ದೈನಿಕ ರಣಝುಂಜಾರ್ ಪತ್ರಿಕೆಯ ಸಂಪಾದಕ ಮನೋಹರ ಕಾಲಕುಂದ್ರೀಕರ ಅವರನ್ನು ಮಹಾರಾಷ್ಟ್ರ ಸರ್ಕಾರದ ಸಚಿವರು, ಶಾಸಕರು, ಜನಪ್ರತಿನಿಧಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಪ್ರಶಂಸೆ ವ್ಯಕ್ತಪಡಿಸಲಾಯಿತು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸನ್ಮಾನ ನೆರವೇರಿಸಿ ಶುಭ ಹಾರೈಸಿದರು.

ಮಹಾರಾಷ್ಟ್ರ ಸರ್ಕಾರದ ಸಚಿವರಾದ ಛಗನ್ ಭುಜಬಲ, ಸುಭಾಷ ದೇಸಾಯಿ, ಏಕನಾಥ ಶಿಂಧೆ, ಅದಿಥಿ ತಟ್ಕರೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Tags:

error: Content is protected !!