hubbali

ಪಿಡಿಓಗಳನ್ನು ಕಂಟ್ರೋಲ್ ಇಡಿ.ಪಿಡಿಒಗಳು ಪಂಚಾಯತಿ ನಡೆಸುತ್ತಾರೆ! ವಸತಿ ಸೋಮಣ್ಣ.

Share

ಜಗದೀಶ್ ನಗರ ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ 188 ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಜಗದೀಶ್ ನಗರ ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮತಿ ವತಿಯಿಂದ ಮನವಿ ಸಲ್ಲಿಸಿದರು ‌
ನಂತರ ಮಾತನಾಡಿದ ವಸತಿ ಸಚಿವ ವಿ‌.ಸೋಮಣ್ಣ ಬಡವರ ಸೋಶಣೆ ನಿಂತಿಲ್ಲ.

ನಾಳೆ ಬರ್ತೀನಿ. ಆಯುಕ್ತರ ಕರಿಸ್ತೀನಿ. ನನ್ನಜೊತೆ ಎಂಟು ದಿನ ಬಾ. ನೀನೇ ಮಂತ್ರಿಗಿರಿ ಮಾಡು. ಮೂರುವರೆ ಲಕ್ಷದಲ್ಲಿಯೂ ದುಡ್ಡು ಹೊಡಿತಿದ್ದಾರೆ. ಎಂದು ಹೋರಾಟಗಾರನಿಗೆ ಹೇಳಿದರು.ಇನ್ನೂ ಆತ್ಮವಂಚನೆ ಮಾಡಿಕೊಳ್ಳಬೇಡಿ. ಬಡವರ ಪರ ಇರಿ. ಶಾಸಕ ಅರವಿಂದ ಬೆಲ್ಲದ್ ಒಳ್ಳೆವರು ಇದ್ದಾರೆ. ಸ್ವಲ್ಪ ಹೈಫೈ ಇದ್ದಾರೆ. ಮೊದಲ ಕಾನೂನು ಹೋಯ್ತು, ಮೋಸ ವಂಚನೆ ಈಗನಡೆಯಲ್ಲ.೨೦೦೧ರಲ್ಲಿ ಅಲೌಟ್ಆದ ಮನೆಗಳಿಗೆ, ಹಸ್ತಾಂತರ ಮಾಡಿಲ್ಲ ಇನ್ನೂ. ಹತ್ತು ಹದಿನೈದು ದಿನಗಳಲ್ಲಿ ಇಷ್ಟು ವರ್ಷದ ಸಮಸ್ಯೆ ಪರಿಹರಿಸುತ್ತೇನೆ. ಒಬ್ಬೊಬ್ಬರು ಒಂದೊಂದೇ ಮನೆ ಪಡೆಯಿರಿ. ಎಂತಹದ್ದೇ ಸಮಸ್ಯೆ ಇದ್ದರೂ ಪರಿಹರಿಸ್ತೀನಿ.

ಬಡವರ ಶೋಷಣೆ ಎಂದೂ ಸಹಿಸಲ್ಲ. ಹೊಡದಾಕಬಿಡುತ್ತನಿ.ಮೋಸ ಮಾಡುಕೆ ಬಿಡುವುದಿಲ್ಲ,ಪಿಡಿಒಗಳ ಕೊರಳ ಪಟ್ಟಿ ಹಿಡಿದು ಕೆಲಸ ತೆಗೆದುಕೊಳ್ಳಿ ಹೇಳಿಕೆ ವಿಚಾರಕ್ಕೆ ಮಾತನಾಡಿ ಪಿಡಿಓಗಳನ್ನು ಕಂಟ್ರೋಲ್ ಇಡಿ. ಪಿಡಿಒ ದೇಶದಲ್ಲಿ ಪಂಚಾಯತಿ ನಡೆಸುವವರು ಒಂದು ಕೋಟಿ ಪಂಚಾಯ್ತಿ ಬರುತ್ತದೆ. ಸತ್ಯ ಇಲ್ಲದೆ ನಾ ಮಾತನಾಡುವುದಿಲ್ಲ. ಬಡವರಿಗೆ ಆದ್ಯತೆ ನೀಡಿ,ಸಮಸ್ಯೆ ಅಲ್ಲ, ಅವಶ್ಯಕತೆ ಇದು. ಪಾಲಿಕೆ ವ್ಯಾಪ್ತಿಯ ಕೊಳಚೆ ಅಭಿವೃದ್ಧಿ ಮಂಡಳಿಗೆ ಬರುತ್ತದೆ. ಅತಿಕ್ರಮಣ ಎನ್ನುವುದಕ್ಕಿಂತ ಎಲ್ಲ ಕಡೆ ಸರ್ವೆ ಮಾಡಿದ್ದೇವೆ. ೨೦ ವರ್ಷಗಳಿಂದ ಹೋರಾಡುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಟ್ಟರೆ ಅವರೇ ಅಭಿವೃದ್ಧಿಯಾಗುತ್ತದೆ ಎಂದರು……

Tags:

error: Content is protected !!