Uncategorized

ದಿ ಟ್ರೇಜರ್ ಲ್ಯಾಂಡ್ ಕೃತಿ ಲೋಕಾರ್ಪಣೆ: ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಜಿಲ್ಲಾಧಿಕಾರಿ ಸಲಹೆ

Share

ಮಕ್ಕಳಲ್ಲಿ ಕನಸು ಬಿತ್ತುವುದು ಶಿಕ್ಷಕರ ಕರ್ತವ್ಯ. ಮಕ್ಕಳಲ್ಲಿ ನಕಾರಾತ್ಮಕ ವಿಚಾರಗಳನ್ನು ತುಂಬಬಾರದು, ಆತ್ಮವಿಶ್ವಾಸ ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ದಿ ಬೆಳಗಾವಿ ರೂರಲ್ ಇಂಗ್ಲಿಷ್ ಟೀಚರ್ಸ್ ಪೋರಂ ವತಿಯಿಂದ ರವಿವಾರ ಬೆಳಗಾವಿ ಮಹಿಳಾ ವಿದ್ಯಾಲಯದಲ್ಲಿ ಎಂ.ಐ .ಪೂಜಾರ ಬರೆದ ‘ದಿ ಟ್ರೇಜರ್ ಲ್ಯಾಂಡ್’ ಎಂಬ ಇಂಗ್ಲಿಷ್ ವ್ಯಾಕರಣ ಪುಸ್ತಕ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಕನ್ನಡವೂ ಇರಬೇಕು.

 

ಇಂಗ್ಲಿಷ್ ಬೇಕೇ ಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಇಂಗ್ಲಿಷ್ ಕಲಿಯಬೇಕು. ಪಾಠ ಓದದೇ ಇದ್ದರೂ ವಿದ್ಯಾರ್ಥಿ ವ್ಯಾಕರಣ ಓದಿಯಾದರೂ ಉತ್ತೀರ್ಣರಾಗುವಂತೆ ಪೂಜಾರ ಪುಸ್ತಕ ಬರೆದಿದ್ದಾರೆ. ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು. ಶಿಕ್ಷಕರ ವೃತ್ತಿ ಕನಸುಗಳನ್ನು ಬಿತ್ತುವಂತದ್ದು. ಆತ್ಮವಿಶ್ವಾಸ ಮೂಡಿಸಿ ಧನಾತ್ಮಕ ಆಸಕ್ತಿ ಹುಟ್ಟುಹಾಕಬೇಕು ಎಂದರು.
ಇAಗ್ಲಿಷ್ ವ್ಯಾಕರಣ ಪುಸ್ತಕದಿಂದ ವಿದ್ಯಾರ್ಥಿಗಳು, ಶಿಕ್ಷಕರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಉಪಯುಕ್ತ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ ಎಂದರು.

ಶಿಕ್ಷಕ ಎಂ. ಆರ್. ಹಿರೇಮಠ ಮಾತನಾಡಿ, ಎಂ.ಐ. ಪೂಜಾರ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರೂಪ್ ವಿದ್ಯಾವರ್ಧಕ ಸಂಘದ ಚೇರಮನ್ ಬಿ. ಜಿ. ವಾಲಿಇಟಗಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪಿ.ಜುಟ್ಟನ್ನವರ ಮತ್ತು ವೈ. ಜೆ. ಭಜಂತ್ರಿ ಆಗಮಿಸಿದ್ದರು.
ಕಾರ್ಯದರ್ಶಿ ಸುರೇಶ ಇಟಗಿ, ವಿಷಯ ಪರಿವೀಕ್ಷಕ ಎಂ.ಎನ್. ಪಾಟೀಲ, ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಸ್.ಎಸ್ .ಮಠದ, ಜನರಲ್ ಸೆಕ್ರೆಟರಿ ರಾಮು ಗುಗವಾಡ, ಪತ್ರಕರ್ತ ಈಶ್ವರ ಹೋಟಿ, ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಯ ಇಂಗ್ಲಿಷ್ ವಿಷಯ ಪರಿವೀಕ್ಷಕರು ಆಗಮಿಸಿದ್ದರು.

ಎಂ.ಐ.ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯಾ ಹಿರೇಮಠ ಪ್ರಾರ್ಥಿಸಿದರು. ಲಲಿತಾ ಮಹಾಜನಶೆಟ್ಟಿ ವಂದಿಸಿದರು. ಐ.ಜಿ.ಸುಬ್ಬಾಪುರಮಠ ನಿರೂಪಿಸಿದರು.

Tags:

error: Content is protected !!