Khanapur

ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈರನ್

Share

ಖಾನಾಪೂರ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಕೋವಿಡ್-19 ವ್ಯಾಕ್ಸಿನ್ ಡ್ರೈರನ್ ಮಾಡಲಾಯಿತು.

ಹೌದು ಖಾನಾಪೂರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಗಣೈಬೇಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಗಡ ಸಮುದಾಯ ಆರೋಗ್ಯ ಕೇಂದ್ರ, ಬೀಡಿ, ಕಕ್ಕೇರಿ, ಲೋಂಡಾ, ಇಟಗಿ, ಪಾರೀಶ್ವಾಡ, ಕಣಕುಂಬಿ ಸೇರಿದಂತೆ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ವ್ಯಾಕ್ಸಿನ್ ವಿತರಣೆಯ ಸಂಪೂರ್ಣ ತಯಾರಿ ಪೂರ್ಣಗೊಂಡಿದ್ದು.

ಇದಕ್ಕೆ ಸಂಬಂಧಿಸಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಸಂಜಯ್ ನಾಂದ್ರೇ ಅವರು ವ್ಯಾಕ್ಸಿನ್ ವಿತರಣೆಯ ಬಗ್ಗೆ ಎಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿ ನೀಡುವ ಮೂಲಕ ಸುವ್ಯವಸ್ಥಿತ ರೀತಿಯಲ್ಲಿ ಈ ವ್ಯಾಕ್ಸಿನ್ ವಿತರಣೆ ಯಶಸ್ವಿಯಾಗಿ ಮಾಡಲು ಜಾಗೃತಿ ವಹಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಗಣೆಬೈಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಯಾವ ರೀತಿಯಲ್ಲಿ ಆರೋಗ ಇಲಾಖೆ ವ್ಯವಸ್ಥೆ ಮಾಡಿಕೊಂಡಿರುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಕೊರೊನಾ ವ್ಯಾಕ್ಸಿನ್ ಡ್ರೈರನ್‍ಗೆ ಖಾನಾಪೂರ ತಾಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು. ಯಶಸ್ವಿಯಾಗಿ ಪೂರ್ಣಗೊಳಿಸಲು ಉತ್ಸುಕರಾಗಿದ್ದಾರೆ.

Tags:

error: Content is protected !!