ಚಲಿಸುತ್ತಿದ್ದ ಬೈಕ್ಗೆ ಶ್ವಾನವೊಂದು ಅಡ್ಡಬಂದ ಪರಿಣಾಮ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿದೆ.
ಧಾರವಾಡದ ಬೆನಕಟ್ಟಿ ಗ್ರಾಮದ ದಿಲ್ ಶಾದ್ ಬಿಸ್ಮಿಲ್ಲಾ ಚಪ್ಪರಬಂಧ್ (43) ಮೃತ ಮಹಿಳೆ.
ನಿಗದಿ ಗ್ರಾಮದಿಂದ ಪ್ರಕಾಶ ಎಂಬುವರ ಬೈಕ್ನಲ್ಲಿ ಧಾರವಾಡಕ್ಕೆ ಮನೆಗೆಲಸಕ್ಕೆಂದು ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಬೈಕ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ನಾಯಿ ಕೂಡ ಮೃತಪಟ್ಟಿದೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.