ಕಳೆದ ಒಂಬತ್ತು ತಿಂಗಳ ಕಾಲ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಪ್ರಾರಂಭವಾಗಿವೆ. ಕೊರೊನಾ ಉಪಟಳದಿಂದ ರಾಜ್ಯ ಸರಕಾರ ಶಾಲೆಗಳಿಗೆ ರಜೆ ಘೊಷಿಸಿತ್ತು. ಈಗ ಮತ್ತೆ ಶಾಲೆ ಪುನರರಾಂಭ ಗೊಂಡಿದ್ದರ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ವಿದ್ಯಾರ್ಥಿಗಳು ಬಹು ಸಂತಸದಿಂದ ಶಾಲೆಗಳಿಗೆ ಆಗಮಿಸಿದ್ದಾರೆ. ಇತ್ತ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿಯ ಸ್ವಾಗತ ದೊರೆತಿದೆ. ಈ ಕುರಿತು ಇಲ್ಲಿದೆ ಇನ್ ನ್ಯೂಜ್ ಸ್ಪೆಷಲ್ ಸ್ಟೋರಿ…
ಕೊರೋನಾ ಉಪಟಳದಿಂದ ಕಳೆದ ಒಂಭತ್ತು ತಿಂಗಳ ಕಾಲ ರಾಜ್ಯಾದ್ಯಂತ ಶಾಲೆಗಳು ಬಂದ್ ಆಗಿದ್ದವು. ಈಗ ಮತ್ತೆ ರಾಜ್ಯದಲ್ಲಿ ಎಂದಿನಂತೆ ಶಾಲಾ ಕಾಲೇಜು ಆರಂಭವಾಗಿವೆ. ಇತ್ತ ವಿಜಯಪುರ ನಗರದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಹು ಸಂತಸದಿಂದ ಆಗಮಿಸಿದ್ರು. ಪಾಲಕರ ಜೊತೆ ಶಾಲೆಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಾಲೆಗೆ ಆಗಮಿಸಿದ ಬಳಿಕ ಸ್ಯಾನಿಟೈಸ್ ಮಾಡಿ ಟೆಂಪರೇಚರ್ ಚೆಕ್ ಮಾಡಿ ಒಳ ಬಿಡಲಾಯಿತು. ವಿಜಯಪುರ ನಗರದ ಪ್ರತಿಷ್ಠಿತ ಹಾಗೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಛತ್ರಪತಿ ಶಿವಾಜಿ ಮಹಾರಾಜ ಎಜ್ಯುಕೇಷನ್ ಸೊಸೈಟಿಯ ರವೀಂದ್ರನಾಥ್ ಟ್ಯಾಗೋರ್ ಶಾಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಮಾಹಿತಿ ಕೇಳಿ ಶಾಲಾ ಆವರಣಕ್ಕೆ ಪ್ರವೇಶ ನೀಡಲಾಯಿತು.
ಮೈಕ್ ಮೂಲಕ ಕೋರೊನಾ ಸುರಕ್ಷತಾ ನಿಮಯಗಳನ್ನು ತಿಳಿಸಿದ ಶಾಲಾ ಆಡಳಿತ ಮಂಡಳಿಯು ಪ್ರತಿಯೊಬ್ಬ ವಿದ್ಯಾರ್ಥಿಯ ತಪಾಸಣೆಯ ಬಳಿಕವೇ ಶಾಲಾ ಆವರಣಕ್ಕೆ ಪ್ರವೇಶ ನೀಡಿತು. ಇನ್ನೂ ಪೋಷಕರು ಖುದ್ದು ನಿಂತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಶಾಲೆಗೆ ಕಳುಹಿಸುತ್ತಿದ್ದರು. ಶಾಲೆಗಳಲ್ಲಿ ರಂಗೋಲಿ ಬಿಡಿಸಿ, ಸೈನಿಟೇಜರ್ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ಶಾಲಾ ಆಡಳಿತ ಮಂಡಳಿಗಳು ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ…
ಇನ್ನೂ ಶಾಲೆ ಆರಂಭಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪುಲ್ ಹ್ಯಾಪಿ ಆಗಿದ್ದರು. ಆರು ತಿಂಗಳ ಕಾಲ ಆನ್ಲೈನ್ ಕ್ಲಾಸುಗಳ ಮುಖಾಂತರ ಕಲಿಕೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ತಮ್ಮ ಲಲವಲಿಕೆ ಕಳೆದುಕೊಂಡಿದ್ದರು. ಕಳೆದ ಒಂಭತ್ತು ತಿಂಗಳಿಂದ ಗೆಳೆಯರು ಗೆಳತಿಯರನ್ನು ಹಾಗೂ ಶಿಕ್ಷಕರನ್ನು ಕಾಣದೆ ಒಂತರಾ ಮಾನಸಿಕ ಖಿನ್ನತೆಗೊಳಗಾಗಿದ್ದ ವಿದ್ಯಾರ್ಥಿಗಳು ಇಂದು ಫುಲ್ ಖುಷ್ ಆಗಿದ್ದರು. ಕಳೆದ ಒಂಭತ್ತು ತಿಂಗಳ ಕಾಲ ನಾವು ವಿದ್ಯಾಬ್ಯಾಸದಿಂದ ವಂಚಿತರಾಗಿದ್ದೇವು.ಆದ್ರೆ ಈಗ ಹೊಸ ವರ್ಷದಂದೆ ಶಾಲೆ ಪ್ರಾರಂಭಿಸಿದ್ದು ಖುಷಿಯಾಗಿದೆ. ನಮ್ಮ ಶಾಲೆಯಲ್ಲಿ ಕೊರೋನಾ ಭೀತಿಯಿಂದ ಮಾಸ್ಕ್, ಹಾಗೂ ಸೈನಿಟೇಜರ್, ಸೊಸಿಯಲ್ ಡಿಸ್ಟೆ ನ್ಸ್ ಬಗ್ಗೆ ನಮ್ಮ ಶಿಕ್ಷಕರು ಜಾಗೃತಿ ಮೂಡಿಸಿದ್ದಾರೆ. ಇವತ್ತು ಬಹಳ ಹ್ಯಾಪಿಯಿಂದ ಶಾಲೆಗೆ ಆಗಮಿಸಿ ವಿದ್ಯಾದೇವತೆ ಸರಸ್ವತಿಗೆ ಪೂಜೆ ಸಲ್ಲಿಸಿ ಶಾಲೆಯೊಳಗೆ ಕಾಲಿಟ್ಟಿದ್ದೇವೆ. ಬಹಳ ಸಂತಸವಾಗಿದೆ ಎನ್ನುತ್ತಾಳೆ ವಿದ್ಯಾರ್ಥಿನಿ ಸೋನು ಪಾಟೀಲ…
.ಒಟ್ನಲ್ಲಿ ಕೊರೋನಾ ಉಪಟಳದಿಂದ ಬಂದ್ ಆಗಿದ್ದ ಶಾಲೆಗಳು ಈಗ ಮತ್ತೆ ಪ್ರಾರಂಭವಾಗಿರೋದು ವಿದ್ಯಾರ್ಥಿಗಳಲ್ಲಿ, ಪೊಷಕರಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳು ಪುಲ್ ಖುಷ್ ಆಗಿದ್ದಾರೆ. ಹೊಸ ವರ್ಷ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಮಾಡಲಿ ಎನ್ನೋ ಆಶಯದೊಂದಿಗೆ ಇನ್ ನ್ಯೂಜ್ ವೀಕ್ಷಕರಿಗೆ ಹೊಸ ವರ್ಷದ ಶುಭಾಶಯಗಳು…