KSRTC ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಡ್ರೈವರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ
.
ಡಿಪೆÇೀ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಏSಖಖಿಅ ಡಿಪೆÇೀ ಎದುರು ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿರುವ ಸರ್ಪರಾಜ ಪಟೇಲ್ ಡ್ರೈವರ್ ಕಮ್ ಕಮ್ ಕಂಡೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹಲವು ದಿನಗಳಿಂದ ಮೇಲಾಧಿಕಾರಿ ಗಳಾದ ದಾನಮ್ಮ ಜೋಡಮುಟ್ಟಿ, ಯಲಗೂರಪ್ಪ ತಾಳೆವಾಡ, ಎಂ.ಬಿ. ಬಿಸನಾಳ್ ಕಿರುಕುಳ ನೀಡುತ್ತಿದ್ದಾರೆ ಎಂದು ಸರ್ಪರಾಜ್ ಆರೋಪಿಸಿದ್ದಾನೆ.
ಇನ್ನೂ ಸರ್ಪರಾಜ್ ಅವರನ್ನು ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.
ಈ ವೇಳೆ ಸರ್ಪರಾಜ್ ಮಾತನಾಡಿ, ಮೇಲಾಧಿಕಾರಿಗಳ ಕಿರುಕುಳ ಜಾಸ್ತಿಯಾಗಿದೆ.
ಬದುಕುವ ಯಾವ ವಾತಾವರಣವೂ ಸಂಸ್ಥೆಯಲ್ಲಿ ಇಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಆದರೂ ಸಮಾಧಾನ ಇಲ್ಲ. ಒಂದಿಲ್ಲೊಂದು ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದೆ ಎಂದರು.
ಸ್ಥಳಕ್ಕೆ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಭೇಟಿ ನೀಡಿದ್ರು…