ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ 4 ಕೋಟಿ ರೂ,ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸಗಟು ತರಕಾರಿ ಮಾರುಕಟ್ಟೆ, ಬ್ಲಾಕ್ “ಡಿ” ನಲ್ಲಿ 35 ಅಂಗಡಿಗಳ ನಿರ್ಮಾಣ ಹಾಗೂ ಇವುಗಳಿಗೆ ಹೊಂದಿಕೊಂಡಂತೆ ಆರ್ ಸಿ ಸಿ ಗಟಾರ, ಕಾಂಕ್ರೀಟ್ ರಸ್ತೆ, ಸಗಟು ತರಕಾರಿ ಮಾರುಕಟ್ಟೆ ಬ್ಲಾಕ್ “ಎ” ನಲ್ಲಿನ ನೆಲಮಾಳಿಗೆಯಲ್ಲಿ 18 ಮಳಿಗೆಗಳನ್ನು ನಿರ್ಮಿಸುವುದು, ಜೊತೆಗೆ ರೈತ ಭವನ ಕಟ್ಟಡ ಹಾಗೂ ಅತಿಥಿ ಗೃಹಗಳ ನವೀಕರಣದ ಕಾಮಕಾರಿಗಳಿಗೆ ಅಡಿಗಲ್ಲು ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಸದಸ್ಯರಾದ ಸುಧೀರ್ ಗಡ್ಡೆ, ಸಂಜು ಮಾದರ್, ಆನಂದ ಪಾಟೀಲ, ಮನೋಜ ಮತ್ತಿಕೊಪ್ಪ, ಆರ್ ಕೆ ಪಾಟೀಲ, ಲಗಮಣ್ಣ ನಾಯ್ಕ, ಪಡಿಗೌಡ ಪಾಟೀಲ, ಮಹೇಶ ಗೋವೆಕರ್, ಮಹೇಶ ಗುಬ್ಜಿ, ನಿಂಗಪ್ಪ ಬಸ್ಸಾಪುರ ಸೇರಿ ಇನ್ನಿತರರು ಉಪಸ್ಥಿತರಿದ್ದರು.